2021-2022ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭ…
ನವದೆಹಲಿ: 2021-2022ನೇ ಸಾಲಿನ ಕೇಂದ್ರ ಬಜೆಟ್ ಇಂದು ಮಂಡನೆಯಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಮೂರನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ಇಂದು ಬೆಳಿಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ತಮ್ಮ ತಂಡದೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ಬಳಿಕ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಅಲ್ಲಿಂದ ಸಂಪುಟ ಸಭೆಗೆ ತೆರಳಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಬಜೆಟ್’ಗೆ ಅನುಮೋದನೆ ಪಡೆದುಕೊಳ್ಳಲಾಯಿತು.
ಲೋಕಸಭೆಯಲ್ಲಿ ಬಜೆಟ್ ಆರಂಭಿಸಿದ ನಿರ್ಮಲಾ ಸೀತಾರಾಮನ್ ಅವರು, ಜಾಗತಿಕ ಆರ್ಥಿಕತೆ ಈಗಾಗಲೇ ಕುಸಿಯತೊಡಗಿದೆ. ಎಂದೂ ಕಂಡರಿಯದ ಕೋವಿಡ್ ಕಾಲದಲ್ಲಿ ಬಜೆಟ್ ಮಂಡನೆಯಾಗುತ್ತಿದೆ. ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸದಿದ್ದಲ್ಲಿ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತಿತ್ತು. ಪಿಎಜಿವೈ ಮೂಲಕ ಆರ್ಥಿಕ ನೆರವು ನೀಡಲಾಗಿದೆ ಎಂದು ಹೇಳಿದ್ದಾರೆ.
ಈವರೆಗಿನ ಮುಖ್ಯಾಂಶಗಳು:
ಸಂಶೋಧನಾ ವಲಯಕ್ಕೆ 50 ಸಾವಿರ ಕೋಟಿ ರೂ.
ಡಿಜಿಟಲ್ ಮೋಡ್ ಪೇಮೆಂಟ್ ಉತ್ತೇಜನಕ್ಕೆ 1500 ಕೋಟಿ ರೂ.
ಕೌಶಲ್ಯಾಭಿವೃದ್ದಿಗೆ ಮೂರ ಸಾವಿರ ಕೋಟಿ ರೂಪಾಯಿ ಅನುದಾನ. 750 ಏಕಲವ್ಯ ಮಾದರಿ ಶಾಲೆಗಳ ಆರಂಭ.
ಎಸ್ ಸಿ, ಎಸ್ ಟಿಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, 750 ಶಾಲೆಗಳನ್ನು ಬುಡಕಟ್ಟು ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ. ಭಾರತ್ ಜಪಾನ್ ನಡುವೆ ಕೌಶಲ್ಯ ಅಭಿವೃದ್ದಿಗೆ ಒಪ್ಪಂದ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ. ಲೇಹ್ ನಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ.ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ಹೊಸ ಸಂಸ್ಥೆ ಸ್ಫಾಪಿಸಲು ನಿರ್ಧಾರ.
ಎನ್ ಜಿಒ ಸಹಭಾಗಿತ್ವದಲ್ಲಿ 100 ಸೈನಿಕ್ ಶಾಲೆಗಳ ಆರಂಭ. ಕಟ್ಟಡ ಕಾರ್ಮಿಕರು,ಅಸಂಘಟಿತ ವಲಯದ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಹೊಸ ಪೋರ್ಟಲ್ ಆರಂಭ.
ಮಹಿಳೆಯರು 24 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ. ಮಧ್ಯಮ ಹಾಗೂ ಸಣ್ಣ ಕೈಗಾರಿಕೆ ಕ್ಷೇತ್ರಕ್ಕೆ 15,700 ಸಾವಿರ ಕೋಟಿ.
16.5 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲ ನೀಡುವಿಕೆ ಗುರಿ. ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ದೇಶದಲ್ಲಿ ಜಾರಿಗೆ ತಂದಿದೆ.
ಹಾಳಾಗುವ ಉತ್ಪನ್ನಗಳ ಪಟ್ಟಿಗೆ 22 ಕೃಷಿ ಉತ್ಪನ್ನ ಸೇರ್ಪಡೆ. ಎಪಿಎಂಸಿಗಳ ಸಬಲೀಕರಣಕ್ಕೆ ಕೇಂದ್ರ ಕ್ರಮ. ಒಂದು ಲಕ್ಷಕ್ಕೂ ಅಧಿಕ ಗ್ರಾಮೀಣ ಜನರಿಗೆ ಆಸ್ತಿ ಹಕ್ಕು ಸಿಕ್ಕಿದೆ.
ಧಾನ್ಯ ಖರೀದಿಗೆ 10.500 ಕೋಟಿ ರೂಪಾಯಿ ಅನುದಾನ ಮೀಸಲು. ಪಶುಸಂಗೋಪನೆ, ಮೀನುಗಾರಿಕೆಗೆ 40 ಸಾವಿರ ಕೋಟಿ.
ಕೃಷಿ, ಕೃಷಿ ಸಂಬಂಧಿತ ಕಾರ್ಮಿಕರ ಆರ್ಥಿಕತೆಗೆ ಒತ್ತು. ಎಲ್ ಐಸಿಯ ಷೇರುಗಳು ಷೇರುಮಾರುಕಟ್ಟೆಯಲ್ಲಿ ಬಿಡುಗಡೆ. ಕೃಷಿಕರ ಆದಾಯ ದ್ವಿಗುಣಗೊಳಿಸಲು ಕೇಂದ್ರದ ನಿರ್ಧಾರ.
ಸರ್ಕಾರಿ ಬ್ಯಾಂಕ್ ಗಳಿಗೆ 20 ಸಾವಿರ ಕೋಟಿ ರೂಪಾಯಿ ಮರುಪೂರಣ. ಕೃಷಿ ಉತ್ಪನ್ನಗಳಿಗೆ ಎಂಎಸ್ ಪಿ ನೀಡಲು ಕೇಂದ್ರ ಸರ್ಕಾರ ನಿರ್ಧಾರ.
ಮುಂದಿನ ಮೂರು ವರ್ಷಗಳಲ್ಲಿ ನೂರು ಜಿಲ್ಲೆಗಳಲ್ಲಿ ಗ್ಯಾಸ್ ಪೈಪ್ ಲೈನ್ ಸ್ಥಾಪನೆ, ಒಂದು ಕೋಟಿ ಕುಟುಂಬಕ್ಕೆ ಉಜ್ವಲಾ ಯೋಜನೆ.
3 ಲಕ್ಷಕ್ಕೂ ಅಧಿಕ ಕೋಟಿ ಮೊತ್ತವನ್ನು ವಿದ್ಯುತ್ ವಲಯಕ್ಕೆ ನೀಡಲು ನಿರ್ಧಾರ. 1 ಸಾವಿರ ಹೊಸ ಗ್ಯಾಸ್ ಏಜೆನ್ಸಿಗಳಿಗೆ ಅವಕಾಶ ನೀಡಲಾಗುತ್ತದೆ.
ಬೆಂಗಳೂರು ಮೆಟ್ರೋ ಫೇಸ್ 2ಎ, 2ಬಿಗೆ 14,788 ಕೋಟಿ ರೂಪಾಯಿ. 1,016 ಕಿಲೋ ಮೀಟರ್ ಮೆಟ್ರೋ ಮಾರ್ಗದ ಗುರಿ ಹೊಂದಲಾಗಿದೆ.
ಉತ್ಪಾದನಾ ವಲಯದ ಮೂಲಕ ಹೆಚ್ಚಿನ ಉದ್ಯೋಗಾವಕಾಶದ ನಿರೀಕ್ಷೆ. ಆರೋಗ್ಯ ಕ್ಷೇತ್ರಕ್ಕೆ ಶೇ.137ರಷ್ಟು ಆರ್ಥಿಕ ನೆರವು ನೀಡಿಕೆ. ಮೂಲ ಸೌಕರ್ಯಕ್ಕೆ 5 ಲಕ್ಷ ಕೋಟಿ ರೂಪಾಯಿ.
ಸ್ವಚ್ಛ ಭಾರತ ಯೋಜನೆಯಡಿ ಪ್ಲ್ಯಾಸ್ಟಿಕ್ ಬಳಕೆ ತಡೆಗೆ ಒತ್ತು. 20 ವರ್ಷ ಹಳೆಯದಾದ ಎಲ್ಲಾ ವಾಹನಗಳನ್ನು ಸ್ಕ್ಯಾಪ್ ಮಾಡಲು ಆದ್ಯತೆ.