ಬಂಟ್ವಾಳ – ಸೂರಿಕುಮೇರಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಪಲ್ಟಿ…

ಬಂಟ್ವಾಳ : ಇಂದು ಬೆಳಿಗ್ಗೆ ಸೂರಿಕುಮೇರಿ ‌ ಮಸೀದಿಯ ಮುಂದೆ ಬೆಂಗಳೂರಿಗೆ ಅನಿಲ ಸಾಗಿಸುತ್ತಿದ್ದ ಎಲ್‌ಪಿಜಿ ಟ್ಯಾಂಕರ್ ಚಾಲಕ ನಿಯಂತ್ರಣ ತಪ್ಪಿ ಟ್ಯಾಂಕರ್‌ ಪಲ್ಟಿಯಾಗಿದೆ.
ಇದರ ಪರಿಣಾಮವಾಗಿ ಮಂಗಳೂರು ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.ಮಂಗಳೂರಿನಿಂದ ಬರುವ ವಾಹನಗಳನ್ನು ಕಲ್ಲಡ್ಕ, ವಿಟ್ಲ ರಸ್ತೆ ಮೂಲಕ ಹೋಗಬೇಕಿದ್ದು, ಉಪ್ಪಿನಂಗಡಿಯಿಂದ ಆಗಮಿಸುವವರನ್ನು ಮಾಣಿ, ಬುಡೋಳಿ, ಕಬಕ ರಸ್ತೆ ಮೂಲಕ ಸಾಗಬೇಕಿದೆ. ವಿಟ್ಲ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಕೆಲವು ಸ್ಥಳೀಯರನ್ನು ಹೊರತುಪಡಿಸಿ ಬುಡೋಳಿ ಯೂತ್ ಫೆಡರೇಶನ್ ಮತ್ತು ಸೂರಿಕುಮೇರ್‌ ಬದ್ರಿಯಾ ಯಂಗ್ ಮೆನ್ ಸದಸ್ಯರ ನಾಯಕತ್ವದಲ್ಲಿ ಸಂಚಾರದಟ್ಟಣೆಯನ್ನು ನಿಯಂತ್ರಿಸಲಾಗುತ್ತಿದೆ.

ಮಸೀದಿಯ ಧ್ವನಿವರ್ಧಕವನ್ನು ಜನರಿಗೆ ಮಾಹಿತಿ ಹಾಗೂ ಎಚ್ಚರಿಕೆ ನೀಡಲು ಬಳಸಲಾಗುತ್ತಿದೆ. ಅನಿಲ ಸೋರಿಕೆಯಾಗದಿದ್ದರೂ ಕೂಡಾ ಬೆಂಕಿ ಬಳಸದಂತೆ ಎಚ್ಚರಿಕೆ ನೀಡಲಾಗಿದೆ.

1694ae59 3851 4546 Be4a 0458793208d8 300x225

Related Articles

Leave a Reply

Your email address will not be published. Required fields are marked *