ಪ್ರೀತಿಯಿಂದಲಿ ಕುಳಿತೆಯಾ?…

ಪ್ರೀತಿಯಿಂದಲಿ ಕುಳಿತೆಯಾ?…
ಕಣ್ಣು ತೆರೆಯಲು ನಿನ್ನ ಕಂಡೆನೆ
ನೀನು ಎನ್ನನು ಕಂಡೆಯಾ?
ಮನದ ದೀಪದಿ ನಿನ್ನ ಕಾಣಲು
ನೀನು ಬೆಳಕನು ಕೊಟ್ಟೆಯಾ?
ತಿಮಿರ ಕಳೆಯುತ ತುಂಬಿ ಚೇತನ
ನನ್ನ ಮನವನು ತೊಳೆದೆಯಾ?
ಜಡವನೋಡಿಸಿ ತೊಡಿಸಿ ನಗುವನು
ಜೀವಜಾಲವ ಪೊರೆವೆಯಾ?
ನಿನ್ನ ಹೊತ್ತೆನೆ ನನ್ನ ಕರದಲಿ
ಪ್ರೀತಿಯಿಂದಲಿ ಕುಳಿತೆಯಾ
ನನ್ನನಗಲದೆ ನೀನು ನಿತ್ಯವು
ತಾಯಿಯಂದದೊಳಿರುವೆಯಾ?
ರಚನೆ: ಡಾ. ವೀಣಾ ಎನ್ ಸುಳ್ಯ
Sponsors