ದ ಕ ಜಿಲ್ಲೆಯಲ್ಲಿ 377 ಮಂದಿಗೆ ಕೊರೊನ ವೈರಸ್ ಸ್ಕ್ರೀನಿಂಗ್ – ಸಿಂಧೂ ಬಿ ರೂಪೇಶ್….
ಮಂಗಳೂರು: ಕೊರೊನ ವೈರಸ್ ಭೀತಿ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 377 ಜನರ ಸ್ಕ್ರೀನಿಂಗ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.
ಇಲ್ಲಿವರೆಗೆ 106 ಜನ ಮನೆಯಲ್ಲೇ ನಿಗಾದಲ್ಲಿದ್ದಾರೆ ಅಲ್ಲದೆ 11 ಸ್ಯಾಂಪಲ್ ಟೆಸ್ಟ್ ಗೆ ಕಳಿಸಿದ್ದು, ಈ ಹಿಂದೆ ಕಳುಹಿಸಿದ 8 ಸ್ಯಾಂಪಲ್ ವಾಪಾಸು ಬಂದಿದೆ. ಅದರಲ್ಲಿ 8 ಸ್ಯಾಂಪಲ್ ನೆಗೆಟಿವ್ ರಿಪೋರ್ಟ್ ಬಂದಿದೆ. ಭಾನುವಾರ ಕೂಡ 9 ಜನ ಬೇರೆ ಬೇರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೋರೊನಾ ಕುರಿತು ಯಾರು ಕೂಡಾ ಗೊಂದಲಕ್ಕೆ ಒಳಗಾಗಬೇಡಿ ಸಾಮಾನ್ಯ ಶೀತ ಜ್ವರಕ್ಕೆ ಅಡ್ಮಿಟ್ ಆಗಬೇಕು ಅಂತಾ ಇಲ್ಲ ಆದರೆ ದೂರ ಪ್ರಯಾಣ ಮಾಡಿದವರು ತಕ್ಷಣ ವೈದ್ಯರನ್ನು ಮತ್ತು ಜಿಲ್ಲಾಡಳಿತವನ್ನು ಸಂಪರ್ಕಿಸಿ ಅಲ್ಲದೆ ವಿದೇಶದಿಂದ ಬಂದವರೆಲ್ಲಾ ಕಡ್ಡಾಯವಾಗಿ 14 ದಿನ ಮನೆಯಲ್ಲೇ ಇರಿ ಎಂದು ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.