ಇಲಿಯ ಬೇಟೆ…

ಇಲಿಯ ಬೇಟೆ…
(ಶಿಶು ಗೀತೆ)
ಆಚೆ ಈಚೆ ನೋಡುತ
ಕಳ್ಳ ಹೆಜ್ಜೆ ಇಟ್ಟಿತು
ಅಡುಗೆ ಮನೆಯ ಕದವನು
ಮೆಲ್ಲ ತಳ್ಳಿ ಬಂದಿತು
ಕಣ್ಣು ರೆಪ್ಪೆ ಮುಚ್ಚದೆ
ಕಾದು ಕುಳಿತು ಇಲಿಯನು
ಕಣ್ಣು ಬಿಡುವ ಮೊದಲೇ
ಹಾರಿ ಹಿಡಿದು ಬಿಟ್ಟಿತು
ಬಾಲವನ್ನು ಕಚ್ಚುತಾ
ಆಟವಾಡುತಿದ್ದಿತು
ತಲೆಯನೊಮ್ಮೆ ಎತ್ತುತ
ಒಡತಿಯನ್ನು ನೋಡಿತು
ಕ್ಷಣವನ್ನು ವ್ಯಯಿಸದೆ
ಮೂಲೆಯನ್ನು ಸೇರಿತು
ನಾಲಗೆಯನು ನೆಕ್ಕುತ
ಮತ್ತೆ ಹೊರಗೆ ಬಂದಿತು
ಅಡುಗೆ ಮನೆಯ ಹಾಲಿನ
ಪಾತ್ರೆಯನ್ನು ನೋಡಿತು
ಕಣ್ಣು ಮುಚ್ಚಿಕೊಂಡೆ
ಕದ್ದು ಹಾಲು ಕುಡಿಯುತು
ರಚನೆ: ಡಾ. ವೀಣಾ ಎನ್ ಸುಳ್ಯ