ಸುಳ್ಯ – ಸರಕಾರಿ ಆಸ್ಪತ್ರೆ ವೈದ್ಯ, ICU ಸಿಸ್ಟರ್,ಡಯಾಲಿಸಿಸ್ ವಿಭಾಗದ ಸಿಬ್ಬಂದಿಗಳ ಸಹಿತ 6 ಮಂದಿಗೆ ಕೊರೊನಾ ಪಾಸಿಟಿವ್…
ಸುಳ್ಯ: ಸರಕಾರಿ ಆಸ್ಪತ್ರೆಯ ಒಬ್ಬ ವೈದ್ಯರು, ICU ಸಿಸ್ಟರ್ ಹಾಗೂ ಮೂವರು ಡಯಾಲಿಸಿಸ್ ವಿಭಾಗದ ಸಿಬ್ಬಂದಿಗಳು ಸೇರಿ ಒಟ್ಟು ಆರು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಯೊಬ್ಬರಿಗೆ ಕೊರೊನಾ ಬಂದಿತ್ತು. ಬಳಿಕ ಅವರು ಮಂಗಳೂರಿಗೆ ಹೋಗಿದ್ದರು. ಆ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ನರ್ಸ್ ಒಬ್ಬರಿಗೆ ಕೂಡಾ ಕೊರೊನಾ ದೃಢವಾಗಿತ್ತು. ಇದೀಗ ಒಬ್ಬ ವೈದ್ಯರು, ICU ಸಿಸ್ಟರ್ ಹಾಗೂ ಮೂವರು ಡಯಾಲಿಸಿಸ್ ವಿಭಾಗದ ತಂತ್ರಜ್ಞರಿಗೆ ಕೊರೋನಾ ಪಾಸಿಟಿವ್ ಬಂದಿದೆ.ಆಸ್ಪತ್ರೆಯಲ್ಲಿರುವ ಪಿರಿಯಾಪಟ್ಟಣದ 50 ವರ್ಷ ಪ್ರಾಯದ ರೋಗಿಯೊಬ್ಬರಿಗೆ ಕೂಡ ಕೊರೊನ ಪಾಸಿಟಿವ್ ದೃಢವಾಗಿದೆ.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸ್ಯಾನಿಟೈಸೇಶನ್ ನಡೆಯಲಿರುವುದರಿಂದ ಇಂದು ಮತ್ತು ನಾಳೆ ಎರಡು ದಿನದ ಮಟ್ಟಿಗೆ ಸೀಲ್ ಡೌನ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಈಗ 17 ಮಂದಿ ಒಳರೋಗಿಗಳಿದ್ದು ಅವರಿಗೆ ಚಿಕಿತ್ಸೆ ನೀಡಲು ಒಬ್ಬರು ವೈದ್ಯಾಧಿಕಾರಿ ಹಾಗೂ ಮೂವರು ನರ್ಸ್ ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಹೊಸದಾಗಿ ಬರುವ ರೋಗಿಗಳಿಗೆ,ಹೆರಿಗೆಗೆ ಬರುವವರಿಗೆ, ಡಯಾಲಿಸಿಸ್ ಗೆ ಕೂಡ ಅವಕಾಶವಿರುವುದಿಲ್ಲ.