ನೆತ್ತರಕೆರೆ :ಶ್ರೀ ರಾಮ ನಾಮ ತಾರಕ ಜಪ ಯಜ್ಞದ ಆಮಂತ್ರಣ ಪತ್ರಿಕೆ ಬಿಡುಗಡೆ…
ಬಂಟ್ವಾಳ:ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿ ನೆತ್ತರಕೆರೆ ಇದರ ಅಶ್ರಯದಲ್ಲಿ ಡಿ.21ರಂದು ತಾಲೂಕಿನ ಕಳ್ಳಿಗೆ-ಪುದು ಗ್ರಾಮದ ನೆತ್ತರಕೆರೆಯಲ್ಲಿ ನಡೆಯಲಿರುವ ಶ್ರೀ ರಾಮ ನಾಮ ತಾರಕ ಜಪ ಯಜ್ಞದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನ.30ರಂದು ಆದಿತ್ಯವಾರ ನೆತ್ತರಕೆರೆಯಲ್ಲಿ ನಡೆಯಿತು.
ಪ್ರಾರಂಭದಲ್ಲಿ ಅಶ್ವಥಕಟ್ಟೆಯಲ್ಲಿ ಪ್ರಾರ್ಥನೆ ನೆರವೇರಿಸಿ,108 ಬಾರಿ ಶ್ರೀ ರಾಮ ನಾಮ ಜಪವನ್ನು ಪಠಿಸಲಾಯಿತು, ಬಳಿಕ ಶ್ರೀ ರಾಮನ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ, ಕೀರ್ತಿಶೇಷ ಕೊಡ್ಮಾಣ್ ಕಾಂತಪ್ಪ ಶೆಟ್ಟಿಯವರ ಧರ್ಮಪತ್ನಿ ಸುಲೋಚನಾ ಕೆ ಶೆಟ್ಟಿ ಇವರ ನೇತೃತ್ವದಲ್ಲಿ ಮಾತೃಶಕ್ತಿ ತಂಡ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮಾರ್ಗದರ್ಶಕರಾದ ಪ್ರಕಾಶ್ಚಂದ್ರ ರೈ ದೇವಸ್ಯ, ಚಂದ್ರಶೇಖರ ಗಾಂಭೀರ ಫರಂಗಿಪೇಟೆ, ಐತಪ್ಪ ಆಳ್ವ ಸುಜೀರುಗುತ್ತು, ಭಾಸ್ಕರ ಚೌಟ ಕುಮ್ಡೇಲ್, ಜ್ಯೋತಿಂದ್ರ ಶೆಟ್ಟಿ ಮುಂಡಾಜೆ ಗುತ್ತು, ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಅನಿಲ್ ಪಂಡಿತ್ ಬ್ರಹ್ಮರಕೊಟ್ಲು, ರಾಧಾಕೃಷ್ಣ ತಂತ್ರಿ ಬೆಂಜಾನಪದವು,ಗಣೇಶ್ ಸುವರ್ಣ ತುಂಬೆ, ಲಕ್ಷ್ಮೀಕಾಂತ್ ನಾಯಕ್ ಕೊಡ್ಮಾಣ್, ನವೀನ್ ನಾಯ್ಕ್ ಕೊಡ್ಮಾಣ್, ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಎಂ ಆರ್ ನಾಯರ್, ಸುರೇಶ ಭಂಡಾರಿ ಅರ್ಬಿ, ಸುಬ್ರಮಣ್ಯ ರಾವ್, ಪ್ರತಾಪ್ ಆಳ್ವ ಸುಜೀರು ಗುತ್ತು, ರಮಾನಂದ ಶೆಟ್ಟಿ ಬೆಂಜನಪದವು, ಎ ಕೆ ಗಿರೀಶ್ ಶೆಟ್ಟಿ ಕುಂಪನಮಜಲು,ಪುರುಷೋತ್ತಮ್ ಕೊಟ್ಟಾರಿ ಮಾಡಂಗೆ, ಸತೀಶ್ ನಾಯ್ಗ ಕೊಡ್ಮಾಣ್ ಕೊಡಿ, ಗೋಪಾಲ್ ಕುಲಾಲ್ ಗೋವಿಂತೋಟ, ಪ್ರವೀಣ್ ಶೆಟ್ಟಿ ಸುಜೀರು,ಜಯಶ್ರೀ ಕರ್ಕೇರ ಮೇರಮಜಲು, ಶೈಲಜಾ ಪಿ ಶೆಟ್ಟಿ ಕೊಟ್ಟಿಂಜ, ವಿದ್ಯಾ ಶೇಖರ್ ಕುಮ್ಡೇಲ್, ಹರಿನಾಕ್ಷಿ ಸದಾನಂದ ನೆತ್ತರಕೆರೆ ಮತ್ತಿತರರು ಉಪಸ್ಥಿತರಿದ್ದರು.
ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವದಾಸ ಕೊಡ್ಮಾಣ್ ಮಾತನಾಡಿ, ಶ್ರದ್ದಾ ಭಕ್ತಿಯಿಂದ ರಾಮನಾಮ ಸ್ಮರಣೆಯೊಂದಿಗೆ ರಾಮ ನಾಮ ಜಪ ಯಜ್ಞ ಕಾರ್ಯಕ್ರಮದಲ್ಲಿ ಎಲ್ಲರೂ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಕಾರ ಕೋರಿ ವಂದಿಸಿದರು.ಕಾರ್ಯದರ್ಶಿ ಬಿನುತ್ ಕುಮಾರ್ ಹಾಗೂ ಕೋಶಾಧಿಕಾರಿ ಕಿಶೋರ್ ಕುಮಾರ್ ಸಹಕರಿಸಿದರು,
ಸಂಯೋಜಕರಾದ ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಸಂಘಟಕ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.




