ಬಂಟ್ವಾಳ – ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ತು ವತಿಯಿಂದ ಮನೆ ಭೇಟಿ….

ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ತು.ರಿ. ಬಂಟ್ವಾಳ ತಾಲೂಕು ಇದರ ಮನೆ ಭೇಟಿ ಕಾರ್ಯಕ್ರಮದ ಅನ್ವಯ ಸಿದ್ದಕಟ್ಟೆ ಪ್ರಶಾಂತ್ ಭಟ್ ಹಾಗೂ ಪಾಂಗಲ್ಪಾಡಿ ವೇದವ್ಯಾಸ ಪಾಂಗಣ್ಣಾಯ ಮನೆಗೆ ಭೇಟಿ ನೀಡಿ ಇಡಬ್ಲ್ಯೂಎಸ್ ಪ್ರಮಾಣಪತ್ರ ಪಡೆದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮೂಲಕ ಬಡ ವಿದ್ಯಾರ್ಥಿಗಳಿಗೆ ಸರಕಾರದಿಂದ ದೊರೆಯುವ ಸ್ಕಾಲರ್ಶಿಪ್ ಪಡೆಯಲು ಸೂಚಿಸಲಾಯಿತು. ಎರುಂಬು ಬಾಲಕೃಷ್ಣ ಕಾರಂತ, ಎo ಸುಬ್ರಮಣ್ಯ ಭಟ್, ಲಕ್ಷ್ಮೀಶ ಮಯ್ಯ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು.