ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ಕರುನಾಡ ಕಾಯಕ ಯೋಗಿ ಸದ್ಭಾವನ ರಾಜ್ಯಪ್ರಶಸ್ತಿ ಪ್ರದಾನ…

ಬೆಂಗಳೂರು:ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ಬೆಂಗಳೂರಿನ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ರಿಜಿಸ್ಟರ್ ರಂಗವೈಭವ 2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮೇ. 9ರಂದು ನಗರಬಾವಿ ಮಲ್ಲತಳ್ಳಿ ಕಲಾಗ್ರಾಮ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆಯಿತು.
ಗೀತ ರಚನೆಗಾರರು ಹಾಗೂ ಸಂಗೀತ ಸಂಯೋಜಕರು, ನಿರ್ದೇಶಕರಾದ ಡಾ. ನಾಗೇಂದ್ರ ಪ್ರಸಾದ್ ಅವರು ,”ಕರುನಾಡ ಕಾಯಕಯೋಗಿ ಸದ್ಭಾವನಾ ” ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಸಾಹಿತಿ ,ಸಂಘಟಕಿ ,ಸಮಾಜ ಸೇವಕಿ, ಡಾ. ಮಾಲತಿ ಶೆಟ್ಟಿ ಮಾಣೂರು ಅವರಿಗೆ ಕರುನಾಡ ಕಾಯಕಯೋಗಿ ಸದ್ಭಾವನಾ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಗ್ರವತಾರ ಚಲನಚಿತ್ರದ ನಿರ್ದೇಶಕರಾದ ಶ್ರೀ ಗುರುಮೂರ್ತಿ ಅವರಿಗೆ ಕರುನಾಡ ಕಾಯಕ ಯೋಗಿ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿದರು. ಸಭಾ ಕಾರ್ಯಕ್ರಮವನ್ನು ಡಾ. ಮಂಜುನಾಥ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ತಾರೆ ಡಾ. ಭವ್ಯ ಪಾಟೀಲ್ ,ಉದ್ಯಮಿ ಸಂಜಯ್ ಕುಮಾರ್, ಬಸವರಾಜ್ ಸದ್ಲಾಪುರ, ಡಾ. ಮಂಜುಳ ಮಹಾದೇವ್ ಡಾ. ಶ್ರೀನಿವಾಸ್ ಬಾಬು ಡಾ. ಮುನಿರಾಜು, ಡಾ. ಮಹೋನಿ ಶೋಭಾ, ವೇದಿಕೆಯಲ್ಲಿದ್ದರು. ವೆಂಕಟರಾಜು ಅವರು ಕಾರ್ಯಕ್ರಮ ನಿರೂಪಿಸಿದರು. ವೀರೇಶ್ ಮುತ್ತಿನ ಮಠ ಸ್ವಾಗತಿಸಿದರು.

Sponsors

Related Articles

Back to top button