ನೂತನ ಕಟ್ಟಡಗಳ ಕಾಮಗಾರಿ ವೀಕ್ಷಣೆ…

ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ ಬಂಟ್ವಾಳ ಇಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಇದರ ನೂತನ ಕಟ್ಟಡಗಳ ಕಾಮಗಾರಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಇಂದು ವೀಕ್ಷಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಪ್ರಾಂಶುಪಾಲ ಬಾಬು ಗಾoವ್ಕರ್, ಉಪನ್ಯಾಸಕರಾದ ವಿಷ್ಣುಮೂರ್ತಿ ಮಯ್ಯ ,ಸುರೇಶ್ ಐತಾಳ , ಸಮಿತಿ ಸದಸ್ಯರಾದ ಎಂ ಸುಬ್ರಮಣ್ಯ ಭಟ್, ಎಂ ವಿಶ್ವನಾಥ ಕೊಟ್ಟಾರಿ ,ವಸಂತ ಶೆಟ್ಟಿ ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.