ಟಿ.ಎಂ.ಶಹೀದ್ ತೆಕ್ಕಿಲ್ ರವರ ಹುಟ್ಟು ಹಬ್ಬ ವರ್ಷಾಚರಣೆ – ಬಡಮಹಿಳೆಯ ಮನೆಯ ಧಾರಂದ ಮುಹೂರ್ತ…

ಸುಳ್ಯ: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇದರ ಸ್ಥಾಪಕಾಧ್ಯಕ್ಷರಾದ ಟಿ. ಎಂ. ಶಹೀದ್ ತೆಕ್ಕಿಲ್ ರವರ 50 ನೇ ಹುಟ್ಟು ಹಬ್ಬದ ವರ್ಷಾಚರಣೆ ಪ್ರಯುಕ್ತ ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ತು ಟಿ. ಬಿ. ಮಹಮ್ಮದ್ ಕುಂಞಿ ಯವರ ಮಗಳು ಫಾತಿಮಾ ಬಡಮಹಿಳೆಗೆ ರೂ. 6 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮನೆಯ ಧಾರಂದ ಮುಹೂರ್ತವನ್ನು ಅ. 14ರಂದು ಪೇರಡ್ಕ ಜುಮಾ ಮಸೀದಿ ಖತೀಬ್‌ರಾದ ರಿಯಾಝ್ ಫೈಝಿ ಎಮ್ಮೆಮಾಡು ರವರು ದುವಾದೊಂದಿಗೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್, ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಅರಂತೋಡು, ಪೇರಡ್ಕ ಜುಮಾ ಮಸೀದಿ ಮುಅಝಿನ್ ನೂರುದ್ದೀನ್ ಮುಸ್ಲಿಯಾರ್, ಸಂಪಾಜೆ ಗ್ರಾ. ಪಂ. ಸದಸ್ಯ ಅಬುಸಾಲಿ ಗೂನಡ್ಕ, ಆಮು ದರ್ಖಾಸ್ತು ಗೂನಡ್ಕ, ಟಿ.ಬಿ. ಮೊಹಮ್ಮದ್ ಕುಂಞಿ ಗೂನಡ್ಕ, ಟಿ. ಬಿ. ಅಬ್ಬಾಸ್ ಗೂನಡ್ಕ, ರಫೀಕ್ ದರ್ಖಾಸ್ತು ಗೂನಡ್ಕ, ರೋಹಿತ್ ಮೇಸ್ತ್ರಿ , ಸಲೀಂ ಗೂನಡ್ಕ, ರಿಝ್ವಾನ್ ದರ್ಖಾಸ್ತು ಗೂನಡ್ಕ, ಶಾಹಿಲ್ ದರ್ಖಾಸ್ತು ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.

3563580d 32b8 430a Bbd1 7cf816ff8f07 300x225

Related Articles