ಪಾಣೆ ಮಂಗಳೂರು ವಲಯ ಮೇಲ್ವಿಚಾರಕಿ ಅಮಿತಾ ಅವರಿಗೆ ಬೀಳ್ಕೊಡುಗೆ…

ಬಂಟ್ವಾಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಇದರ ಸಜೀಪ ಮುನ್ನೂರು ಒಕ್ಕೂಟದ ವತಿಯಿಂದ ಪಾಣೆ ಮಂಗಳೂರು ವಲಯ ಮೇಲ್ವಿಚಾರಕಿ ಆಗಿ ಕಳೆದ ಆರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅಮಿತಾ ಅವರು ಕಡೂರು ತಾಲೂಕಿಗೆ ವರ್ಗಾವಣೆಗೊಂಡಿದ್ದು, ಆ ಪ್ರಯುಕ್ತ ಬೀಳ್ಕೊಡುವ ಸಮಾರಂಭ ಮಾಚಿದೇವ ಸಭಾಭವನದಲ್ಲಿ ಜರಗಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಿ, ಶಿಸ್ತುಬದ್ಧವಾಗಿ ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಿದಾಗ ಸಮಾಜ ಅವರ ಸೇವೆಯನ್ನು ಗುರುತಿಸುತ್ತದೆ ಎಂದರು. ಜಿಲ್ಲಾ ಕುಂಬಾರ ಯುವ ವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಮಾತನಾಡಿ ಸಮಾಜಕ್ಕೆ ಒಳ್ಳೆಯ ಸೇವೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು. ಒಕ್ಕೂಟದ ಅಧ್ಯಕ್ಷ ಗಂಗಾಧರ ಭಂಡಾರಿ ಸೇವಾನಿರತೆ ಬೇಬಿ ಶುಭ ಹಾರೈಸಿದರು.