ಬಾಳ್ತಿಲ ಬಸದಿಯಲ್ಲಿ ಮೃತ್ಯುಂಜಯ ಆರಾಧನೆ…

ಬಂಟ್ವಾಳ: ಕಲ್ಲಡ್ಕ ಸಮೀಪದ ಶ್ರೀ ಆದಿನಾಥ ತೀರ್ಥಂಕರ ಬಸದಿ ಬಾಳ್ತಿಲದಲ್ಲಿ ಶ್ರೀ ಜ್ಞಾನೇಶ್ವರ ಮುನಿಮಹಾರಾಜ್ ಅವರ ಶಿಷ್ಯೆ ಕ್ಷುಲ್ಲಿಕಾ‌ ವಿಶುದ್ಧ ಮತಿ ಮಾತಾಜಿಯವರು ಭವ್ಯ ಮಂಗಳ ವರ್ಷಾ ಯೋಗದ ನಿಮಿತ್ತ ಮೊಕ್ಕಾಂ ಹೂಡಿದ್ದು ಪ್ರತಿದಿನ ಶ್ರೀ ಆದಿನಾಥ ಸ್ವಾಮಿಗೆ ವಿಶೇಷ‌ ಅಲಂಕಾರ ಪೂಜೆ ಹಾಗೂ ವಿಶೇಷ ಸೇವೆ ನಡೆಯುತ್ತಿದೆ.
ಸೆ. 29 ರಂದು ಮೃತ್ಯುಂಜಯ ಆರಾಧನೆ ಮತ್ತು ನವಗ್ರಹ ಶಾಂತಿ ನಡೆಯಿತು.
ಉದಯ ಕುಮಾರ್ ಜೈನ್ ಕುಟುಂಸ್ಥರು ಪೂಜೆ ಸೇವೆ ನಡೆಸಿದರು.
ಅಖಿಲ ವಿಜಯಕುಮಾರ್ ಬೆಳ್ತಂಗಡಿ ಮನೆಯವರು ಆಹಾರ ದಾನ ಸೇವೆ ನಡೆಸಿಕೊಟ್ಟರು.
ಪ್ರಮುಖರಾದ ಉದ್ಯಮಿ ಪದ್ಮಪ್ರಸಾದ್ ಜೈನ್ ಬುಡೋಳಿ, ಮಹಾವೀರ ಪ್ರಸಾದ್ ಜೈನ್ ಪೆರಾಜೆ, ಆದಿರಾಜ ಜೈನ್ ಕೇದಿಗೆ, ಅಮಿತ್ ಕುಮಾರ್ ಜೈನ್,ಅನಿಲ್ ಕುಮಾರ್ ಜೈನ್, ಪಾಪೆತ್ತಿಮಾರು,ಉದಯ ಕುಮಾರ್ ಮದ್ವ, ನ್ಯಾಯವಾದಿ ಶಿವ ಪ್ರಕಾಶ್ , ಬೃಜೇಶ್ ಜೈನ್ ಬಾಳ್ತಿಲ ಬೂಡು ಮೊದಲಾದವರು ಧಾರ್ಮಿಕ ಕಾರ್ಯಕ್ರಮದಲ್ಲಿ‌ ಉಪಸ್ಥಿತರಿದ್ದರು.

whatsapp image 2024 09 29 at 5.31.00 pm

Related Articles

Back to top button