ಗ್ರಾಮ ಸಮೃದ್ಧಿ ಯೋಜನೋತ್ಸವ…

ಮೂಡುಬಿದಿರೆ: ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಲಕ್ಷ್ಮಿ ನಾರಾಯಣ ವೀರಾಂಜನೇಯ ಸ್ವಾಮಿ ಸನ್ನಿಧಿಯ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆದ ಗ್ರಾಮ ಸಮೃದ್ಧಿ ಯೋಜನೋತ್ಸವ ಕಾರ್ಯಕ್ರಮವನ್ನು ಶ್ರೀ ಮುಕ್ತಾನಂದ ಸ್ವಾಮೀಜಿ ಹಾಗೂ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಂಗಾಧರ ಭಟ್, ಪುರಸಭಾ ಸದಸ್ಯರಾದ ಶ್ರೀಮತಿ ಜಯಶ್ರೀ ಕೇಶವ್, ಸುರೇಶ್ ಕೋಟ್ಯಾನ್, ಪ್ರಮುಖರಾದ ವೇದಮೂರ್ತಿ ನಂದಳಿಕೆ ವಿಠಲ ಭಟ್, ಮಿಥುನ್ ರೈ, ನಿತ್ಯಾನಂದ ಹೆಗ್ಡೆ, ಸುರೇಂದ್ರ ಹೆಗ್ಡೆ, ಮಮತಾ ಎಸ್ ಮೊದಲಾದವರು ಉಪಸ್ಥಿತರಿದ್ದರು.

