ಯಕ್ಷಗಾನ ಭೀಷ್ಮ ಬಲಿಪರ ನಿಧನಕ್ಕೆ ಶ್ರೀ ಪುತ್ತಿಗೆ ಶ್ರೀ ಸಂತಾಪ…

ಉಡುಪಿ: ತೆಂಕು ತಿಟ್ಟು ಯಕ್ಷಗಾನದ ಪ್ರಾತ:ಸ್ಮರಣೀಯ ಭಾಗವತ , ದಶಾವತಾರ ಮೇಳಗಳ ನಿರ್ದೇಶನ ಮಾಡಿ ಭಕ್ತಿ ಸಂಸ್ಕೃತಿ- ಕನ್ನಡ ಭಾಷೆ ಗಳ ಉಳಿವಿಗೆ ಅನ್ಯಾದೃಶ ಕೊಡುಗೆ ನೀಡಿದ ಬಲಿಪ ನಾರಾಯಣ ಭಾಗವತರ ನಿಧನ ನಮ್ಮೆಲ್ಲರಿಗೆ ದುಃಖ ತಂದಿದೆ. ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಪ್ರಾರ್ಥಿಸುತ್ತಾ ಯಕ್ಷಗಾನ ರಂಗ ಅವರ ಸ್ಫೂರ್ತಿಯೊಂದಿಗೆ ಬೆಳೆಯಲಿ ಎಂದು ಹಾರೈಸುತ್ತಿದ್ದೇವೆ ಎಂಬುದಾಗಿ ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇ0ದ್ರ ತೀರ್ಥ ಶ್ರೀ ಪಾದರು ಸಂತಾಪ ವ್ಯಕ್ತಪಡಿಸಿದ್ದಾರೆ.