ಕ್ರೈಸ್ತರನ್ನು ಪ್ರಚೋದಿಸಲು ಪ್ರಭಾಕರ್‌ ಭಟ್‌ ಭಾಷಣ – ರಮಾನಾಥ್ ರೈ….

ಬಂಟ್ವಾಳ : ಕಲ್ಲಡ್ಕ ಪ್ರಭಾಕರ್‌ ಭಟ್‌ ಕ್ರೈಸ್ತರನ್ನು ಪ್ರಚೋದನೆ ಮಾಡುವ ನಿಟ್ಟಿನಲ್ಲಿ ಭಾಷಣ ಮಾಡಿದ್ದಾರೆ. ದಕ್ಷಿಣ ಕನ್ನಡವನ್ನು ಮತೀಯ ಪ್ರಯೋಗಾಲಯ ಮಾಡಲು ಮುಂದಾದ ಅವರು ಕನಕಪುರದಲ್ಲಿ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದಾರೆ. ಆದರೆ ಕ್ರೈಸ್ತ ಸಮುದಾಯ ದಕ್ಷಿಣ ಕನ್ನಡ ಜಿಲ್ಲೆಯ ಸಾಮರಸ್ಯ ಬಯಸುವವರು ಎಂದು ಆರ್‌ಎಸ್‌ಎಸ್‌ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ರಮಾನಾಥ್ ರೈ ಆರೋಪ ಮಾಡಿದ್ದಾರೆ.
ಕನಕಪುರದಲ್ಲಿ ಯೇಸು ಪ್ರತಿಭೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿ ಕಲ್ಲಡ್ಕ ಪ್ರಭಾಕರ್‌ ಮಾತನಾಡಿದ್ದರ ವಿರುದ್ಧ ಸಿಡಿಮಿಡಿಗೊಂಡ ಅವರು, “ಬಿಜೆಪಿಯ ಅಂಗಸಂಸ್ಥೆಗಳು ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿದೆ. ಪ್ರಭಾಕರ್‌ ಭಟ್‌ ಅವರು ಕ್ರೈಸ್ತರನ್ನು ಪ್ರಚೋಧಿಸುವ ನಿಟ್ಟಿನಲ್ಲಿ ಭಾಷಣ ಮಾಡಿದ್ದಾರೆ. ಅವರನ್ನು ಪ್ರಚೋದನೆಗೊಳಿಸಿ ಅವರು ಬೀದಿಗಿಳಿದರೆ ರಾಜಕೀಯ ಲಾಭ ಪಡೆಯುವ ಹುನ್ನಾರ ಮಾಡುತ್ತಿದ್ದಾರೆ. ಆದರೆ ಕ್ರೈಸ್ತರು ಪ್ರಚೋದನೆಗೆ ಒಳಗಾಗುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಶ್ರೀ ರಾಮ ಶಾಲೆಯ ಕುರಿತು ಮಾತನಾಡಿದ ಅವರು, “ರಾಜ್ಯ ಸರ್ಕಾರ ಶ್ರೀ ರಾಮ ಶಾಲೆಗೆ ನೀಡಲಾಗುವ ಅಕ್ಕಿ ನಿಲ್ಲಿಸಿದ್ದಾರೆ ಎಂದು ಹೇಳುತ್ತಾರೆ. ಆದರೆ ಒಂದು ಕೆ.ಜಿ ಅಕ್ಕಿಯೂ ಕೊಲ್ಲೂರು ದೇವಸ್ಥಾನದಿಂದ ಶಾಲೆಗೆ ನೀಡಿಲ್ಲ. ಪ್ರತಿ ತಿಂಗಳು ನಾಲ್ಕು ಲಕ್ಷದ ಚೆಕ್ ಮಾತ್ರ ನೀಡಲಾಗುತ್ತಿದೆ. ಅದನ್ನು ಶಾಲೆಗೆ ಬಳಕೆ ಮಾಡಲಾಗಿದೆಯೋ ಅಥವಾ ಸ್ವಂತ ಕಾರ್ಯಗಳಿಗೆ ಬಳಸಲಾಗಿದೆಯೋ ತಿಳಿದಿಲ್ಲ ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.

ಬಿಜೆಪಿ ಪಕ್ಷವು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ದ.ಕ ಜಿಲ್ಲೆಯಲ್ಲಿ ನಡೆದ ಯಾವುದೇ ಹತ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಕೈವಾಡವಿಲ್ಲ. ಈ ವಿಷಯವನ್ನು ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಲು ಸಿದ್ಧ ಎಂದು ತಿಳಿಸಿದರು.

ರಾಜ್ಯದಲ್ಲಿ ಎಸ್‌ಡಿಪಿಐ ಸಂಘಟನೆ ನಿಷೇಧ ವಿಚಾರದಲ್ಲಿ ಮಾತನಾಡಿ, ನಾನು ಯಾವುದೇ ಮತೀಯವಾದವನ್ನು ಒಪ್ಪುವುದಿಲ್ಲ. ನಿಷೇಧ ಮಾಡುವಲ್ಲಿ ಲಾಭ ನಷ್ಟದ ಲೆಕ್ಕಾಚಾರ ಇರುವ ಸಾಧ್ಯತೆಯಿದೆ. ಇದರಿಂದಾಗಿ ಯಾರಿಗೆ ಲಾಭ ಅನ್ನುವುದನ್ನು ನೀವು ತಿಳಿಯಬೇಕು. ನಿಷೇಧದಿಂದ ಬಿಜೆಪಿಗೆ ಲಾಭ ಆಗುವುದಾದರೆ ನಿಷೇಧ ಮಾಡುತ್ತಾರೆ. ನಷ್ಟ ಆಗುತ್ತದೆ ಎಂದು ಆದಲ್ಲಿ ನಿಷೇಧ ಮಾಡದೆಯೂ ಇರಬಹುದು ಎಂದು ಹೇಳಿದರು.

Sponsors

Related Articles

Leave a Reply

Your email address will not be published. Required fields are marked *

Back to top button