ಸಂಪಾಜೆ ಮತ್ತು ಅರಂತೋಡು ಗ್ರಾ.ಪಂ ವಿವಿಧ ಭಾಗಗಳ ಅಭಿವೃದ್ಧಿ ಕಾಮಗಾರಿಗೆ ಅನುದಾನಕ್ಕಾಗಿ ಮನವಿ…

ಸುಳ್ಯ: ಸಂಪಾಜೆ ಗ್ರಾಮದ ಮೂರನೇ ವಾರ್ಡಿನ ಮೂಲೆ ದರ್ಕಾಸ್ ರಸ್ತೆ ಹಾಗು ಅಂಗನವಾಡಿ ಬಳಿ ಕಚ್ಚಾ ರಸ್ತೆಯ ಕಾಂಕ್ರೀಟೀಕರಣಕ್ಕೆ ಕ್ರಮವಾಗಿ 5 ಲಕ್ಷ ಮತ್ತು 3 ಲಕ್ಷ ಅನುದಾನಕ್ಕಾಗಿ ವಿಧಾನ ಪರಿಷತ್ ಸದಸ್ಯರುಗಳಾದ ಪ್ರತಾಪ ಚಂದ್ರ ಶೆಟ್ಟಿ ಹಾಗು ಮೋಹನ್ ಕೊಂಡಜ್ಜಿ ರವರಿಗೆ ಕಾಂಗ್ರೆಸ್ ಮುಖಂಡರಾದ ಟಿ ಎಂ ಶಾಹೀದ್ ತೆಕ್ಕಿಲ್ ಮನವಿ ಮಾಡಿದರು.
ಹಾಗೂ ಸಂಪಾಜೆ ಗ್ರಾಮದ ಮೂರನೇ ವಾರ್ಡಿನ ಕೊರಂಬಡ್ಕ ರಸ್ತೆಯ ಕಾಂಕ್ರಿಟೀಕರಣಕ್ಕೆ 3 ಲಕ್ಷ ಅನುದಾನಕ್ಕಾಗಿ ವಿಧಾನ ಪರಿಷತ್ ಸದಸ್ಯೆಯಾದ ಶ್ರೀಮತಿ ವೀಣಾ ಅಚ್ಚಯ್ಯ ರವರಿಗೆ ಟಿ ಎಂ ಶಾಹೀದ್ ತೆಕ್ಕಿಲ್ ಮನವಿ ಮಾಡಿದರು. ಜೊತೆಯಲ್ಲಿ ಅಜರುದ್ದೀನ್ ಗೂನಡ್ಕ ಹಾಗು ಸಲಿಂ ಟರ್ಲಿ ಉಪಸ್ಥಿತರಿದ್ದರು
ಸಂಪಾಜೆ ಗ್ರಾಮ ಪಂಚಾಯತ್ ಮತ್ತು ಅರಂತೋಡು ಗ್ರಾಮ ಪಂಚಾಯತ್ ವಿವಿಧ ಭಾಗಗಳ ಅಭಿವೃದ್ಧಿ ಕಾಮಗಾರಿಗೆ ಅನುದಾನಕ್ಕಾಗಿ ವಿಧಾನ ಪರಿಷತ್ ಸದಸ್ಯರಾದ ಫಾರೂಕ್ ಅವರನ್ನು ಕಾಂಗ್ರೆಸ್ ಮುಖಂಡರಾದ ಟಿ ಎಂ ಶಾಹೀದ್ ತೆಕ್ಕಿಲ್ ಭೇಟಿಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಜರುದ್ದೀನ್ ಗೂನಡ್ಕ ಉಪಸ್ಥಿತರಿದ್ದರು.

IMG 20210926 WA0036 300x266

IMG 20210926 WA0033 300x225

IMG 20210926 WA0020 225x300

IMG 20210926 WA0025 300x225

Related Articles