ಸುಳ್ಯ – ಬಿಜೆಪಿ 179 ನೇ ಬೂತ್ ಸಮಿತಿ ವತಿಯಿಂದ ಮೋದಿಜಿಯವರಿಗೆ ಪೋಸ್ಟ್ ಕಾರ್ಡ್ ಮೂಲಕ ಧನ್ಯವಾದ…
ಸುಳ್ಯ: ಭಾರತೀಯ ಜನತಾ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೆತ್ರದ 179 ನೇ ಬೂತ್ ಸಮಿತಿ ವತಿಯಿಂದ ಪಂಡಿತ್ ದಿನದಯಾಳ್ ಉಪಾಧ್ಯಯರ 105ನೇ ಹುಟ್ಟುಹಬ್ಬದ ಆಚರಣೆ ಹಾಗೂ ನರೇಂದ್ರ ಮೋದಿಜಿಯವರ 71ನೇ ಹುಟ್ಟುಹಬ್ಬ ಹಾಗೂ ಮೋದಿಜಿಯವರ ಗುಜರಾತಿನ ಮುಖ್ಯಮಂತ್ರಿ (13ವ), ದೇಶದ ಪ್ರಧಾನ ಮಂತ್ರಿಯಾಗಿ ( 7ವ) ಉತ್ತಮ ಆಡಳಿತ ಮತ್ತು ಯೋಜನೆಗಳನ್ನು ಅನುಷ್ಠಾನಗೋಳಿಸಿರುವ ಮೋದಿಜಿಯವರಿಗೆ ಪೋಸ್ಟ್ ಕಾರ್ಡ್ ಕಳುಹಿಸುವುದರ ಮೂಲಕ ಧನ್ಯವಾದಗಳನ್ನು ತಿಳಿಸಲಾಯಿತು.
ಸುಳ್ಯದ ದುರ್ಗಾಪರಮೇಶ್ವರಿ ಕಲಮಂದಿರದಲ್ಲಿ ಕಾರ್ಯಕ್ರಮ ನಡೆಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಬೂತ್ ಸಮಿತಿ ಅಧ್ಯಕ್ಷ ದಯಾನಂದ ಕೇರ್ಪಳ, ಮಂಡಲ ಬಿಜೆಪಿ ಕಾರ್ಯದರ್ಶಿ ಮೋಹಿನಿ ನಾಗರಾಜ್, ಸುಳ್ಯ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಜಾಧವ್ ಕೇರ್ಪಳ, ನಗರ ಪಂಚಾಯತ್ ಸದಸ್ಯ ಸುಧಾಕರ್ ಕುರುಂಜಿ ಭಾಗ್, ನಗರ ಪಂಚಾಯತ್ ಮಾಜಿ ಸದಸ್ಯ ಗೋಪಾಲ್ ಎಸ್ ನಡುಬೈಲು, ಅವಿನಾಶ್ ಕುರುಂಜಿ, ಸುನಿಲ್ ಕೇರ್ಪಳ, ರತ್ನಾವತಿ ಕುರುಂಜಿ ಗುಡ್ಡೆ, ಪ್ರೇಮಲತಾ ಕೇರ್ಪಳ ಉಪಸ್ಥಿತರಿದ್ದರು.