ಕೆಪಿಸಿಸಿ ಮಾಧ್ಯಮ ಮುಖ್ಯಸ್ಥ ರಾಜು ಗೌಡ ತೆಕ್ಕಿಲ್ ಗೆ ಭೇಟಿ…

ಸುಳ್ಯ :ಕೆಪಿಸಿಸಿ ಮಾಧ್ಯಮ ಮುಖ್ಯಸ್ಥ ಮೈಸೂರು ವಿಭಾಗದ ಉಸ್ತುವಾರಿ ರಾಜು ಗೌಡ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅರಂತೋಡು ಟಿ.ಎಮ್.ಶಹೀದ್ ತೆಕ್ಕಿಲ್ ರವರ ಮನೆಗೆ ಭೇಟಿ ನೀಡಿದರು.
ಅವರನ್ನು ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು . ಟಿ.ಎಮ್.ಶಹೀದ್ ರವರು ಪೇರಡ್ಕ ಪ್ರದೇಶವನ್ನು ಅಭಿವೃದ್ಧಿ ಪಡಿಸಿದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿಲಾಯಿತು. ಮರುದಿನ ಸಂಪಾಜೆ ಗ್ರಾಮದ ಪೇರಡ್ಕ ಫಾರ್ಮ್ ಹೌಸ್ ಗೆ ಭೇಟಿ ನೀಡಿ ಉಪಹಾರ ಸೇವಿಸಿ ಮಂಗಳೂರು ಕಡೆಗೆ ತೆರಳಿದರು.
ಈ ಸಂದರ್ಭದಲ್ಲಿ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ,ಕಾಂಗ್ರೆಸ್ ಮುಖಂಡ ಬಸವರಾಜ್ ,ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್,ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಸಂಯೋಜಕ ತಾಜ್ ಮಹಮ್ಮದ್ ,ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಎಸ್.ಕೆ.ಹನೀಫ್,ಅಬುಸಾಲಿ ಪಿ.ಕೆ.,ಕೆಪಿಸಿಸಿ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ರಿಯಾಜ್ ಕಲ್ಲುಗುಂಡಿ,ಪ್ರಮುಖರಾದ ಮುನೀರ್ ದಾರಿಮಿ, ಹಕೀಮ್ ಪೇರಡ್ಕ, ರಹೀಂ ಬೀಜದ ಕಟ್ಟೆ, ಅಜರುದ್ದೀನ್ ಚೇರೂರ್, ಅಯ್ಯುಬ್ ,ಅಶ್ರಫ್ ,ಇಕ್ಬಾಲ್, ನಿಜಾಮುದ್ದೀನ್, ಹಾರೀಸ್, ಅಶ್ರಫ್ ಕೆ. ,ತಾಜುದ್ದೀನ್ ಟರ್ಲಿ, ಅಶ್ರಫ್ ಪೇರಡ್ಕ ,ಸಾಧುಮಾನ್ ತೆಕ್ಕಿಲ್ ,ಜುನೈದ್ ತೆಕ್ಕಿಲ್ ,ಉಮ್ಮರ್, ಜುನೈದ್ ತೆಕ್ಕಿಲ್, ಲುಕ್ಮಾನ್, ಇರ್ಷಾದ್, ಇರ್ಫಾನ್ ಮೊದಲಾದವರು ಇದ್ದರು.

 

Sponsors

Related Articles

Back to top button