ಭಾರತ ದೇಶದ ಸಾಲದ ಹೊರೆ ಕಾಂಗ್ರೆಸ್ ನವರಿಂದಾಗಿದೆಯೇ, ಬಿಜೆಪಿ ಯವರಿಂದಾಗಿದೆಯೇ? – ಎಂ. ವೆಂಕಪ್ಪ ಗೌಡ ಪ್ರಶ್ನೆ…
ಸುಳ್ಯ : ಹಿಂದೆ ಬಿಜೆಪಿ ಯವರು ನೆರೆ ಹೊರೆ ದೇಶಗಳಲ್ಲಿನ ಪೆಟ್ರೋಲ್ ಬೆಲೆಯನ್ನು ನಮ್ಮ ದೇಶದ ಪೆಟ್ರೋಲ್ ಬೆಲೆಗೆ ಹೋಲಿಸಿ ಬಿಜೆಪಿ ಸರಕಾರ ದೇಶದಲ್ಲಿ ಬಂದರೆ ಬಿಸ್ಲರಿ ನೀರಿನ ಬಾಟಲಿ ದರದಲ್ಲಿ ಮಾರಾಟ ಮಾಡುತ್ತೇವೆ ಎಂದು ಭಾಷಣ ಮಾಡುತ್ತಿದ್ದರು. ಇದೀಗ ಪೆಟ್ರೋಲ್ ಡೀಸೆಲ್ ದರ ಶರವೇಗದಲ್ಲಿ ಮೂರಂಕೆ ದಾಟಿ ಸಮುದ್ರದ ಸುನಾಮಿ ಅಲೆಗಳು ಕಡಲ ತೆರೆಗೆ ಅಪ್ಪಳಿಸಿದಂತೆ ಜನರ ಮೇಲೆ ಒಂದೇ ಸಮನೆ ಅಪ್ಪಳಿಸುತ್ತಿರುವಾಗ ಬಿಜೆಪಿಗರು ನಿದ್ದೆ ಮಾಡುತ್ತಿದ್ದಾರಾ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ . ವೆಂಕಪ್ಪ ಗೌಡ ಪ್ರಶ್ನಿಸಿದ್ದಾರೆ .
ಬೆಲೆ ಏರಿಕೆಯಿಂದ ಜನಸಾಮನ್ಯರ ಜೀವನ ದುಸ್ತರವಾಗಿದೆ ಎಂದು ಕಾಂಗ್ರೆಸ್ ಜನರ ಪರ ಮಾತಾಡಿದರೆ , ಇದಕ್ಕೆಲ್ಲಾ ಹಿಂದಿನ ಕಾಂಗ್ರೆಸ್ ಸರಕಾರ ಸಾಲಮಾಡಿ ಹೋಗಿರೋದು ಕಾರಣ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ವಾಸ್ತವವಾಗಿ 70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಸಾಲ 53,11,081 ಸಾವಿರ ಕೋಟಿ , ಆದ್ರೆ ಬಿಜೆಪಿ ಕೇವಲ 57 ತಿಂಗಳಲ್ಲಿ ಅಂದರೆ 2014 ರಿಂದ 2018 ರ ಅವಧಿಗೆ ಮಾಡಿದ ಸಾಲ 30,28 ,945 ಸಾವಿರ ಕೋಟಿಗಳು . ಈಗ ಈ ಅಂಕಿ ಅಂಶಗಳ ಪ್ರಕಾರ ಬಿಜೆಪಿಗೆ ಕಾಂಗ್ರೇಸ್ ನ್ನು ಟೀಕಿಸುವ ಹಕ್ಕಿದೆಯಾ ಎಂದು ಕೂಡ ವೆಂಕಪ್ಪ ಗೌಡ ಕೇಳಿದ್ದಾರೆ.
ಒಂದು ಅಂಕಿ ಅಂಶ ಪ್ರಕಾರ ಕಾಂಗ್ರೆಸ್ ಸರಕಾರ ಇರುವಾಗ ತೈಲ ರೂಪದ ಆದಾಯ ಸರಕಾರಕ್ಕೆ ಇದ್ದಿದ್ದು ಕೇವಲ ಐವತ್ತು ಸಾವಿರ ಕೋಟಿ .ಆದರೆ ಅದೇ ಮೂಲದಿಂದ ಈಗ ಬಿಜೆಪಿ ಸರಕಾರಕ್ಕೆ ಬರುತ್ತಿರುವ ಅದಾಯ ಮೂರು ಲಕ್ಷದ ಐವತ್ತ ಎರಡು ಸಾವಿರ ಕೋಟಿ ! ಈ ಹಣ ಎಲ್ಲಿ ಹೋಯಿತು ಅಂತ ನಾವು ಕೇಳಬಾರದೇ ?. ಇವತ್ತು ಜನಸಾಮಾನ್ಯರ ತೆರಿಗೆಯನ್ನು ಪ್ರಧಾನಿ ಮೋದೀಜಿಯವರು ತಮಗಾಗಿ ಪ್ರತ್ಯೇಕವಾಗಿ ಸಂಚರಿಸಲು ತಯಾರಾಗುತ್ತಿರುವ ವಿಷೇಶ ವಿಮಾನಕ್ಕೆ , ಸುರಂಗ ಮಾರ್ಗಕ್ಕೆ ,ಇಪ್ಪತ್ತು ಸಾವಿರ ಕೋಟಿಯ ಸೆಂಟ್ರಲ್ ವಿಸ್ತಾ ನಿರ್ಮಾಣಕ್ಕೆ ವಿನಿಯೋಗಿಸುವ ಅಗತ್ಯತೆ ಏನಿದೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದರೆ ನಾವು ದೇಶದ್ರೋಹಿಗಳಾಗುತ್ತೇವೆ .ಇದು ವಿಪರ್ಯಾಸ ಆಲ್ಲವೇ? ಎಂದು ಎಂ . ವೆಂಕಪ್ಪ ಗೌಡ ಪತ್ರಿಕಾ ಪ್ರಕಟಣೆಯ ಮೂಲಕ ಪ್ರಶ್ನಿಸಿದ್ದಾರೆ.