ಸುಳ್ಯ – ಇಂಧನ ಬೆಲೆ ಏರಿಕೆ ವಿರೋಧಿಸಿ NSUI ವತಿಯಿಂದ ಪ್ರತಿಭಟನೆ…

ಸುಳ್ಯ: ಭಾರತೀಯ ರಾಷ್ಟ್ರೀಯ ವಿಧ್ಯಾರ್ಥಿ ಒಕ್ಕೂಟ (NSUI ) ಸುಳ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋದಿಸಿ ಬ್ರಹತ್ ಪ್ರತಿಭಟನೆ ಸುಳ್ಯದ ಪೈಚಾರಿನ ಪೆಟ್ರೋಲ್ ಬಂಕ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಪ್ರಾಸ್ತಾವಿಕವಾಗಿ ಮತನಾಡಿದರು. “ಮುಂಬರುವ ದಿನಳಲ್ಲಿ ಶಾಲಾ-ಕಾಲೇಜು ಪ್ರಾರಂಭವಾದ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇದೆ ರೀತಿ ಇದ್ದರೆ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಉಂಟಾಗಲಿದೆ. ಸಾರಿಗೆ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಅನಿವಾರ್ಯದಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಬೈಕನ್ನು ಬಳಸುತ್ತಾರೆ. ಹೀಗಿರುವಾಗ ಸರಕಾರ ಪೆಟ್ರೋಲ್,ಡೀಸೆಲ್ ಬೆಲೆಯೇರಿಕೆ ಮಾಡಿ ವಿದ್ಯಾರ್ಥಿಗಳ ಮೇಲೆ ಹೊರೆ ಹಾಕಿದಂತಾಗಿದೆ. ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ತಕ್ಷಣ ಇಳಿಸಬೇಕೆಂದು ಅವರು ಒತ್ತಾಯಿಸಿದರು.

ಪ್ರತಿಭಟನಾ ಕಾರ್ಯಕ್ರಮದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ ಅವರು ಕೇಕ್ ಕತ್ತರಿಸಿದರು. ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಟಿ. ಎಂ ಶಾಹೀದ್ ರವರು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ವೆಂಕಪ್ಪ ಗೌಡ, ಧನಂಜಯ ಅಡ್ಪಂಗಾಯ, ಪಿ.ಎಸ್ ಗಂಗಾಧರ, ಶಶಿಧರ್ ಎಂ.ಜೆ,ಸುರೇಶ್ ಎಂ.ಹೆಚ್, ಶ್ರೀಹರಿ ಕುಕ್ಕುಡೆಲು, ರಾಜಾರಾಂ ಭಟ್, ಷರೀಫ್ ಕಂಟಿ, ಶಾಹುಲ್ ಹಮೀದ್, ಶಾಪಿ ಕುತ್ತಮೊಟ್ಟೆ, ಸವದ್ ಗೂನಡ್ಕ, ಗೋಕುಲ್ ದಾಸ್, ಮಹಮದ್ ಕುಞಿ ಗೂನಡ್ಕ, ನಂದರಾಜ ಸಾಂಕೇಶ, ಧನುಷ್ ಕುಕ್ಕೇಟಿ, ಶಾಹಾಲ್ ಕೆ.ಎಸ್, ಸಂಪತ್ ಕುಮಾರ್ ಮಡಪ್ಪಾಡಿ ಉಪಸ್ಥಿತರಿದ್ದರು. ಕಾರ್ಯಕ್ರವನ್ನು ಪವನ್ ಅಂಬೆಕಲ್ಲು ಸ್ವಾಗತಿಸಿ, ಆಶಿಕ್ ಅರಂತೋಡು ವಂದಿಸಿದರು.

 

Sponsors

Related Articles

Back to top button