ಅರಂತೋಡು- ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟ…

ಸುಳ್ಯ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ (ಪದವಿ ಪೂರ್ವ ವಿಭಾಗ)ಮಂಗಳೂರು ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟ ನಡೆಯಿತು.
ಪಂದ್ಯಾಟದ ಉದ್ಘಾಟನೆಯನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಸುಳ್ಯದ ಪ್ರಾಧ್ಯಾಪಕ ಡಾ.ಹರ್ಷವರ್ಧನ್ ಕುತ್ತಮೊಟ್ಟೆ ನೆರವೇರಿಸಿದರು.ಕಾಲೇಜಿನ ಸಂಚಾಲಕರು ಮತ್ತು ರಾಷ್ಟ್ರ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಆರ್.ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಸ್ವಾಗತಿಸಿದರು. ಮುಖ್ಯಗುರು ಸೀತಾರಾಮ ಎಂ.ಕೆ.,ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ್, ಕಾಲೇಜಿನ ಕ್ರೀಡಾ ಮಂತ್ರಿ ಕೀರ್ತನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಶಾಂತಿ ಎ.ಕೆ.ವಂದಿಸಿದರು. ಉಪನ್ಯಾಸಕ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಲಿಂಗಪ್ಪ , ಪದ್ಮಕುಮಾರ್, ಚಂದ್ರಶೇಖರ್, ಧನ್ಯರಾಜ್, ಚಿದಾನಂದ ಸಹಕರಿಸಿದರು. ತಾಲೂಕಿನ ಬಾಲಕರ ಮತ್ತು ಬಾಲಕಿಯರ 14 ತಂಡಗಳು ಭಾಗವಹಿಸಿದ್ದವು.