ಸೆ.9ರಿಂದ ಜೇಸಿ ಜೋಡುಮಾರ್ಗ ನೇತ್ರಾವತಿಯಿಂದ ಜೇಸಿ ಸಪ್ತಾಹ ಉದ್ಘಾಟನೆ…

ಬಂಟ್ವಾಳ:ಜೇಸಿಐ ಜೋಡುಮಾರ್ಗ ನೇತ್ರಾವತಿ ಘಟಕದ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಸೆ.9ರಿಂದ ಮೊದಲ್ಗೊಂಡು 15ರತನಕ ಜೇಸಿ ಸಪ್ತಾಹ ಕಾರ್ಯಕ್ರಮಗಳು ಜೆಸಿಐ ಭಾರತದ ಮಾರ್ಗಸೂಚಿಯಂತೆ ನಡೆಯುಲಿದೆ.
ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಧ್ವಜಾರೋಹಣ ಕಾರ್ಯಕ್ರಮ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ರಮ್ಯಾ ಸೋಮಯಾಜಿ ಅವರು ಚಾಲನೆ ನೀಡಿ ಶುಭಹಾರೈಸಿದ್ದಾರೆ ಎಂದು ಬಂಟ್ವಾಳ ಜೆಸಿಐ ಘಟಕದ ಅಧ್ಯಕ್ಷೆ ತೃಪ್ತಿ ಹೇಳಿದರು.
ಬಿ.ಸಿ.ರೋಡಿನಲ್ಲಿ ಸೆ. 9ರಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ ಸೇರಿದಂತೆ ವಿವಿಧೆಡೆ ನಾಯಕತ್ವ ತರಬೇತಿ ಮತ್ತು ಮ್ಯಾರಥಾನ್, ಪ್ರತಿಭಾ ಪ್ರದರ್ಶನ ಹಾಗೂ ಸದಸ್ಯರಿಗೆ ಗ್ರಾಟಿಟ್ಯೂಡ್ ಪತ್ರ ವಿತರಣೆ ನಡೆಯಲಿದೆ’ ಎಂದು ಅವರು ವಿವರಿಸಿದರು.
ಸೆ.10ರಂದು ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ತರಬೇತುದಾರ ವಿಕ್ರಂ ನಾಯಕರಿಂದ ಜೀವನ ಕೌಶಲ ತರಬೇತಿ, ಸೆ.11ರಂದು ಕೊಯಿಲ ಶಾಲೆಯಲ್ಲಿ ಯೋಗಾಸನ ಸ್ಪರ್ಧೆ, ಸೆ.12ರಂದು ಬಿಸಿರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಜೇಸಿ ವ್ಯವಹಾರ ಮ್ಯಾರಥಾನ್ , ಸೆ.13ರಂದು ಬಿಸಿರೋಡಿನಲ್ಲಿ ಕರ್ತವ್ಯಕ್ಕಾಗಿ ಧ್ವನಿ ಕಾರ್ಯಕ್ರಮ, ಸೆ.14ರಂದು ಯುವಕಯುವತಿಯರಿಗೆ ನಾಯಕತ್ವ ತರಬೇತಿ ಶಿಬಿರ ಏರ್ಪಡಿಸಲಾಗಿದೆ.ಸೆ. 15ರಂದು ಸಾಂಸ್ಕೃತಿಕ ಸಂಜೆ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದೊಂದಿಗೆ ಸಮಾರೋಪ ಸಮಾರಂಭ ಸಂಯೋಜಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ 1986ರಲ್ಲಿ ಆರಂಭಗೊಂಡ ಅಂತಾರಾಷ್ಟ್ರೀಯ ಜೆಸಿಐ ಸಂಸ್ಥೆ ಜೋಡುಮಾರ್ಗ ಘಟಕದಲ್ಲಿ ಹಲವಾರು ಮಂದಿ ನಾಯಕರು ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರನ್ನು ಸಮಾಜಕ್ಕೆ ಅರ್ಪಿಸಿದೆ. ರಾಷ್ಟ್ರ ಮತ್ತು ವಲಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ ಎಂದು ಮಾಜಿ ಅಧ್ಯಕ್ಷೆ ವಲಯಾಧಿಕಾರಿ ಗಾಯತ್ರಿ ಲೋಕೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಜೆಸಿಐ ರಾಜ್ಯ ತರಬೇತುದಾರ ಜಯಾನಂದ ಪೆರಾಜೆ,ಸದಸ್ಯೆ ತೃಷಾ ಮತ್ತಿತರರು ಉಪಸ್ಥಿತರಿದ್ದರು.