ಸಜಿಪ ಮುನ್ನೂರು ಗ್ರಾಮ ಪಂಚಾಯತ್ – ವಿಶೇಷ ಗ್ರಾಮ ಸಭೆ…
ಬಂಟ್ವಾಳ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಅಂಗವಾಗಿ ತ್ಯಾಜ್ಯ ಮುಕ್ತ ಗ್ರಾಮ ಯೋಜನೆಯಂತೆ ವಿಶೇಷ ಗ್ರಾಮ ಸಭೆ ನಡೆಯಿತು.
ಪಂಚಾಯತ್ ಅಧ್ಯಕ್ಷೆ ಅನಿತಾ ಉಪಾಧ್ಯಕ್ಷೆ ಸುಮತಿ, ಧಾರ್ಮಿಕ ಮುಂದಾಳು ಎಂ ಸುಬ್ರಹ್ಮಣ್ಯ ಭಟ್ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಸಭೆಯಲ್ಲಿ ಘನತ್ಯಾಜ ಘಟಕಕ್ಕೆ ಮಂಜೂರಾದ ಸ್ಥಳದಲ್ಲಿ ಅಗತ್ಯ ಕಾ ಮಗಾರಿ ಕೆಲಸಆಗದೆ ತ್ಯಾಜ್ಯ ಹಾಕಿರುವ ಕ್ರಮವನ್ನು ಖಂಡಿಸಲಾಯಿತು. ಘನತ್ಯಾಜ್ಯ ಘಟಕ ಪಕ್ಕದಲ್ಲಿ ಸಾರ್ವಜನಿಕ ಸ್ಮಶಾನ ಕ್ಕೆ ಸ್ಥಳ ಮಂಜೂರು ಮಾಡಿರುವ ಕ್ರಮವನ್ನು ವಿರೋಧಿಸಲಾಯಿತು. ಗ್ರಾಮದ ಮನೆ ಮನೆಯಿಂದ ಕಸ ಸಂಗ್ರಹಿಸಲು ತೀರ್ಮಾನಿಸಲಾಯಿತು. ಚರ್ಚೆಯಲ್ಲಿ ಮಾಜಿ ಪಂಚಾಯತ್ ಅಧ್ಯಕ್ಷರಾದ ಯೂಸುಪ್ ಕರಂದಾಡಿ, ಮಹಮ್ಮದ್ ಶರೀಫ್ ಹಾಗೂ ಅಹಮದ್ ಕಬೀರ್, ಇಬ್ರಾಹಿಂ, ಜಬ್ಬಾರ್, ರೋಷನ್, ಸಲೀಂ ಗ್ರಾಮ ಪಂಚಾಯಿತಿ ಸದಸ್ಯರುಗಳು ಪಾಲ್ಗೊಂಡರು. ಪಿಡಿಒ ಲಕ್ಷ್ಮಣ್ ಸ್ವಾಗತಿಸಿ, ವಂದಿಸಿದರು.