ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ಬಂಟ್ವಾಳ ಘಟಕ – ಪ್ರಥಮ ಸಭೆ…

ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ಬಂಟ್ವಾಳ ಘಟಕ ಇದರ ಪ್ರಥಮ ಸಭೆಯು ಕಶೆಕೋಡಿ ಕಲಾ ಆಶ್ರಯ ಸಭಾಭವನದಲ್ಲಿ ಜಿಲ್ಲಾ ಘಟಕ ಅಧ್ಯಕ್ಷರಾದ ಕೃಷ್ಣರಾಜ ಭಟ್ ಪೊಳಲಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ ಸೂರ್ಯನಾರಾಯಣ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿ ಪ್ರಕಾಶ್ ತಂತ್ರಿ, ಬಂಟ್ವಾಳ ಘಟಕ ಅಧ್ಯಕ್ಷ ಶಿವರಾಮ ಮಯ್ಯ, ಪದಾಧಿಕಾರಿಗಳಾದ ಶ್ರೀನಿಧಿ ಮುಚ್ಚಿನ್ನಾಯ, ಈಶ್ವರ ಭಟ್ ಮಾದಕಟ್ಟೆ, ಶಂಕರನಾರಾಯಣ ಶರ್ಮ ಏರುಂಬು ಬಾಲಕೃಷ್ಣ ಕಾರಂತ, ಎo ಸುಬ್ರಹ್ಮಣ್ಯ ಭಟ್ ಆಮೆ ನವರಾಜ ಭಟ್ ಕೆ ವಾಸುದೇವ ಭಟ್ ಮೊದಲಾದವರು ಉಪಸ್ಥಿತರಿದ್ದರು, ತಾಲೂಕಿನ ಬ್ರಾಹ್ಮಣರ ಪಟ್ಟಿ ಸಿದ್ಧಪಡಿಸಲು ನಿರ್ಧರಿಸಲಾಯಿತು ಮುಂದಿನ ಸಭೆಯನ್ನು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಸಲು ತೀರ್ಮಾನಿಸಲಾಯಿತು.