ಕೆಸಿಎಫ್ ಒಮಾನ್ ನ್ಯಾಷನಲ್ ವಾರ್ಷಿಕ ಮಹಾಸಭೆ: ನೂತನ ಸಾರಥಿಗಳ ಆಯ್ಕೆ…
ಒಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಅಯ್ಯೂಬ್ ಕೋಡಿಯವರ ಅಧ್ಯಕ್ಷತೆಯಲ್ಲಿ ಅಲ್ ಫವಾನ್ ಸಭಾಂಗಣ ಹಝ್ರತ್ ಮಾಝಿನ್ (ರ) ವೇದಿಕೆ ಬರ್ಕಾದಲ್ಲಿ 2022 ಮೇ. 20 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಅವರು ದುಆ ಗೆ ನೇತೃತ್ವ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಯ್ಯಿದ್ ಸೈಫುದ್ದೀನ್ ಹೈದ್ರೋಸಿ ತಂಙಳ್ ಕೊಡಗು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯರವರು ವರದಿ ವಾಚಿಸಿದರು. ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿಯವರು ಲೆಕ್ಕ ಪತ್ರ ಮಂಡಿಸಿದರು. ನಂತರ ಸಭೆಯಲ್ಲಿ ಮಂಜೂರು ಮಾಡಲಾಯಿತು. KCF ಅಂತರಾಷ್ಟ್ರೀಯ ಸಮಿತಿಯಿಂದ RO ಆಗಿ ಆಗಮಿಸಿದ್ದ ಇಕ್ಬಾಲ್ ಬೊಲ್ಮಾರ್ ಬರ್ಕರವರು ಕೆಸಿಎಫ್ ನ ಆಯಾ ಹುದ್ದೆಗಳಲ್ಲಿರುವರು ಕಾರ್ಯನಿರ್ವವಹಿಸಬೇಕಾದ ಚಟುವಟಿಕೆಗಳನ್ನು ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ನಂತರ ಹಳೇ ಕಮಿಟಿಯನ್ನು ಬರ್ಕಾಸ್ತುಗೊಳಿಸಿ, ನೂತನ ಸಮಿತಿಯನ್ನು ರಚಿಸಲಾಯಿತು.
2022- 23 ನೇ ಸಾಲಿನ ಸಮಿತಿಯ ಅಧ್ಯಕ್ಷರಾಗಿ ಅಯ್ಯೂಬ್ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಕ್ ಹಾಜಿ ಸುಳ್ಯ, ಕೋಶಾಧಿಕಾರಿಯಾಗಿ ಆರಿಫ್ ಕೋಡಿ , ಸಂಘಟನಾಧ್ಯಕ್ಷರಾಗಿ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಎರುಮಾಡ್, ಸಂಘಟನಾ ಕಾರ್ಯದರ್ಶಿಯಾಗಿ ಸಫ್ವಾನ್ ಕರೋಪಾಡಿ, ಶಿಕ್ಷಣ ವಿಭಾಗದ ಅಧ್ಯಕ್ಷ ರಾಗಿ ಆಗಿ ಝುಬೈರ್ ಸಅದಿ ಪಾಟ್ರಕೋಡಿ, ಕಾರ್ಯದರ್ಶಿ ಯಾಗಿ ನವಾಝ್ ಮಣಿಪುರ, ಸಾಂತ್ವನ ವಿಭಾಗದ ಅಧ್ಯಕ್ಷ ರಾಗಿ ಕಲಂದರ್ ಬಾಷಾ ತೀರ್ಥಹಳ್ಳಿ, ಕಾರ್ಯದರ್ಶಿ ಯಾಗಿ ಅಬ್ಬಾಸ್ ಮರಕ್ಕಡ, ಇಹ್ಸಾನ್ ವಿಭಾಗದ ಅಧ್ಯಕ್ಷ ರಾಗಿ ಇಕ್ಬಾಲ್ ಎರ್ಮಾಳ್, ಕಾರ್ಯದರ್ಶಿ ಯಾಗಿ ಸಂಶುದ್ದೀನ್ ಪಾಲೆತ್ತಡ್ಕ, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಇರ್ಫಾನ್ ಕೂರ್ನಡ್ಕ, ಕಾರ್ಯದರ್ಶಿಯಾಗಿ ಮುಝಮ್ಮಿಲ್ ಅಳಕೆಮಜಲು, ಆಡಳಿತ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷರಾಗಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಕಾರ್ಯದರ್ಶಿ ಯಾಗಿ ಶಫೀಕ್ ಎಲಿಮಲೆ, ಐಟೀಮ್ ಕೋರ್ಡಿನೇಟರ್ ಆಗಿ ಹನೀಫ್ ಮನ್ನಾಪು, ಉರ್ದು ವಿಂಗ್ ಕೋರ್ಡಿನೇಟರ್ ಆಗಿ ಝುಬೈರ್ ಖಾಝಿ ತುಮಕೂರು ಹಾಗೂ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಸದಸ್ಯರುಗಳಾಗಿ ಇಕ್ಬಾಲ್ ಬೊಳ್ಮಾರ್ ಬರ್ಕ, ಇಬ್ರಾಹೀಂ ಹಾಜಿ ಅತ್ರಾಡಿ, ಹಂಝ ಹಾಜಿ ಕನ್ನಂಗಾರ್, ಉಬೈದುಲ್ಲಾ ಸಖಾಫಿ ಹಾಗೂ ಹಾಗೂ ರಾಷ್ಟ್ರೀಯ ಸಮಿತಿಯ ಎಕ್ಸಿಕ್ಯುಟಿವ್ ಸದಸ್ಯರುಗಳಾಗಿ ಎಲ್ಲಾ ಝೋನ್ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಇವರು ಗಳನ್ನು ಆರಿಸಲಾಯಿತು.
ಝೈಬೈರ್ ಸಅದಿ ಪಾಟ್ರಕೋಡಿ ಸ್ವಾಗತಿಸಿ, ಸ್ವಾದಿಕ್ ಹಾಜಿ ಸುಳ್ಯರವರು ವಂದಿಸಿದರು. ಸಭೆಯಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಎಲ್ಲಾ ಝೋನ್ ಅಧ್ಯಕ್ಷರು ಮತ್ತು ರಾಷ್ಟ್ರೀಯ ಕೌನ್ಸಿಲರ್ ಗಳು ಭಾಗವಹಿಸಿದರು.