KCF ಒಮಾನ್-SSF ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ ಉಸ್ತಾದ್ ರವರಿಗೆ ಸನ್ಮಾನ…

ಒಮಾನ್:ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ವತಿಯಿಂದ ಒಮಾನ್ ಸಂದರ್ಶನದಲ್ಲಿ ಇದ್ದ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (SSF ) ಇದರ ರಾಜ್ಯಾಧ್ಯಕ್ಷ ಹಾಫಿಝ್ ಸುಫಿಯಾನ್ ಸಖಾಫಿ ಅಲ್ ಹಿಕಮಿ ಇವರನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಕೆಸಿಎಫ್ ಐಸಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಸಯ್ಯದ್ ಆಬಿದ್ ಅಲ್ ಐದರೂಸಿ ತಂಙಳ್, ಕೆಸಿಎಫ್ ಒಮಾನ್ ಅಧ್ಯಕ್ಷ ಜನಾಬ್ ಅಯ್ಯೂಬ್ ಕೋಡಿ, ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ, ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ, ಸಂಘಟನಾ ಅಧ್ಯಕ್ಷ ಉಬೈದುಲ್ಲಾ ಸಖಾಫಿ ,ಕೆಸಿಎಫ್ ಐಸಿ ಕೌನ್ಸಿಲ್ ಸದಸ್ಯರಾದ ಇಬ್ರಾಹಿಮ್ ಹಾಜಿ ಅತ್ರಾಡಿ,ಕೆಸಿಎಫ್ ಒಮಾನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಬಹು ಉಮರ್ ಸಖಾಫಿ , ಅಬ್ಬಾಸ್ ಮರಕಡ, ಮುಝಮ್ಮಿಲ್ ಅಳಕೆಮಜಲು , ಸಲೀಮ್ ಮಿಸ್ಬಾಯಿ, ಹಾರಿಸ್ ಕೊಳಕೇರಿ, ನವಾಝ್ ಮಣಿಪುರ, ಲತೀಫ್ ಮಂಜೇಶ್ವರ ಹಾಗೂ ಇಹ್ಸಾನ್ ವಿಭಾಗದ ರಿಸೀವರ್ ಕಲಂದರ್ ಬಾವ, ಮಸ್ಕತ್ ಝೊನ್ ನಾಯಕರಾದ ಶಾಹುಲ್ ಹಮೀದ್, ಮುಸ್ತಫಾ ಮಂಗಳೂರು ಇವರು ಉಪಸ್ಥಿತರಿದ್ದರು.