ಯುವ ಸಂಗಮ ಮೆಲ್ಕಾರ್ ಇವರ ಮೂಲಕ ಮಾನವೀಯತೆ ಮೆರೆದ ಇಸ್ರೇಲ್ ಫ್ರೆಂಡ್ಸ್….
ಬಂಟ್ವಾಳ: ಹುಟ್ಟಿನಿಂದಲೇ ವೈಕಲ್ಯದ ಬಿನ್ನ ಸಾಮಥ್ರ್ಯದ ಇಬ್ಬರು ಹದಿ ಹರೆಯದ ಬಾಲಕರನ್ನು ಗುರುತಿಸಿದ ಮೆಲ್ಕಾರ್ ಯುವ ಸಂಗಮದ ಪದಾಧಿಕಾರಿಗಳು ಭಾರತೀಯ ಅನಿವಾಸಿಗಳ ಇಸ್ರೇಲ್ ಫ್ರೆಂಡ್ಸ್ ಸಂಸ್ಥೆಯ ಮೂಲಕ ಇಬ್ಬರಿಗೂ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದಿದ್ದಾರೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯ ಬೋಳಂಗಡಿ ಕ್ವಾಟ್ರಸ್‍ನಲ್ಲಿ ವಾಸವಾಗಿರುವ ರಾಜೀವಿ ವಸಂತ ಕುಲಾಲ್ ದಂಪತಿಯ ಪುತ್ರ ಧನುಷ್ ಹುಟ್ಟಿನಿಂದಲೇ ಭಿನ್ನ ಸಾಮಧ್ಯದವನಾಗಿದ್ದು ಕಳೆದ 14ವರ್ಷಗಳಿಂದ ಮಲಗಿದ್ದಲ್ಲೇ ತಾಯಿಯ ಮಡಿಲಲ್ಲಿ ನಿರಂತರ ಶುಶ್ರೂಸೆಯಲ್ಲಿ ಅಸಹನೀಯ ಬದುಕು ಸಾಗಿಸುತ್ತಿದ್ದಾನೆ. ಈ ಮಗುವಿಗೆ ರೂ 15,000-00 ಸಹಾಯಧನವನ್ನು ನೀಡಲಾಯಿತು.
ಕಂಚಿಕಾರು ಪೇಟೆಯ ಜಲಜಾಕ್ಷಿ-ರಾಜೇಶ್ ಆಚಾರ್ಯ ದಂಪತಿ ಪುತ್ರ “ಕೌಶಿಕ್” ಹುಟ್ಟಿನಿಂದಲೇ ಎರಡೂ ಕೈಗಳಿಲ್ಲದೇ ತನ್ನ ಎಲ್ಲ ಕೈಗಳ ಚಟುವಟಿಕೆಗಳನ್ನು ಕಾಲಿನಿಂದಲೇ ಮಾಡುತ್ತಾ ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿದ್ದು ಪಾಠ ಮತ್ತು ಪಠ್ಯೇತರ ಚಟುವಟಿಕೆ, ಡ್ಯಾನ್ಸ್, ಆಟೋಟದಲ್ಲಿ ಎಲ್ಲರಂತೆ ಮುಂದಿದ್ದಾನೆ. ಆತನಿಗೆ 10,000 ನಗದನ್ನು ನೀಡಲಾಯಿತು.
ಯುವಸಂಗಮ ಮೆಲ್ಕಾರ್‍ನ ಪಧಾಧಿಕಾರಿ ಸಂತೋಷ್ ಕುಮಾರ್ ಅವರು ಇಸ್ರೇಲ್‍ನಲ್ಲಿ ಉದ್ಯೋಗದಲ್ಲಿದ್ದು ಅವರು ಇಸ್ರೇಲ್ ಫ್ರೆಂಡ್ಸ್ ಸಂಘಟನೆಯ ಅಧ್ಯಕ್ಷ ದಿನಕರ ಪುತ್ರನ್ ಅವರ ಮೂಲಕ ರೂ 25 ಸಾವಿರವನ್ನು ಈ ಉದ್ದೇಶಕ್ಕಾಗಿ ಯುವ ಸಂಗಮ ಮೆಲ್ಕಾರ್ ಸಂಘಟಣೆಗೆ ವರ್ಗಾಯಿಸಿದರು. ಈ ಇಬ್ಬರು ಮಕ್ಕಳಿಗೂ ಸಹಾಯಧನವನ್ನು ಯುವಸಂಗಮ ಮೆಲ್ಕಾರ್ (ರಿ) ಇದರ ಅಧ್ಯಕ್ಷ ಓಂ ಪ್ರಕಾಶ್ ಆಚಾರ್ಯ ಅವರು ಪ್ರಧಾನ ಮಾಡಿದರು.
ಯುವ ಸಂಗಮದ ಮಾಜಿ ಅಧ್ಯಕ್ಷರುಗಳಾದ ವಿಠ್ಹಲ ಶೆಣೈ ಬೋಳಂಗಡಿ, ಹರೀಶ್ ಶೆಣೈ ಬೋಳಂಗಡಿ, ಕರುಣಾಕರ ಮೆಲ್ಕಾರ್, ಜಾನೇಶ್ವರ ಪ್ರಭು ಬೋಳಂಗಡಿ, ಸಂಘದ ಗೌರವಧ್ಯಕ್ಷರಾದ ಎಂ.ಎನ್. ಕುಮಾರ್ ಉಪಸ್ಥಿತರಿದ್ದರು.