ಅಸಂಘಟಿತ ಕಾರ್ಮಿಕರಿಗೆ ಶ್ರಮ ಸನ್ಮಾನ ಪ್ರಶಸ್ತಿಗೆ ಅರ್ಜಿ ಆಹ್ವಾನ….
ಬಂಟ್ವಾಳ: ಅಸಂಘಟಿತ ವಲಯದ ಕಾರ್ಮಿಕರಾದ ಖಾಸಗಿ ವಾಣಿಜ್ಯ ವಾಹನ ಚಾಲಕರು, ಹಮಾಲರು, ಟೈಲರುಗಳು, ಚಿಂದಿ ಆಯುವವರು , ಗೃಹಕಾರ್ಮಿಕರು, ಮೆಕಾನಿಕ್ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಮಂಡಕ್ಕಿ ಭಟ್ಟಿ ಕಾರ್ಮಿಕರುಗಳಿಗೆ ಮಾರ್ಚ್ 1ರಂದು ಶ್ರಮ ಸಮ್ಮಾನ ಪ್ರಶಸ್ತಿ ನೀಡುವ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ , ದ.ಕ ಜಿಲ್ಲೆ ಮಂಗಳೂರು ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅರ್ಹರು ಸಲ್ಲಿಸಬೇಕಾದ ದಾಖಲೆಗಳು ಅರ್ಜಿ ನಮೂನೆ 5ನ್ನು ಕಾರ್ಮಿಕ ಅಧಿಕಾರಿ ಕಛೇರಿಯಿಂದ ಪಡೆದುಕೊಂಡು ಕಾರ್ಮಿಕರ ಬಳಿ ಇರುವ ಸ್ಮಾರ್ಟ್ ಕಾರ್ಡ್, ವಿದ್ಯಾರ್ಹತೆಯ ಪ್ರಮಾಣ ಪತ್ರ , ಸರ್ವಿಸ್ ಸರ್ಟಿಫಿಕೇಟ್, ಪೋಲಿಸ್ ಇಲಾಖೆಯಿಂದ ಯಾವುದೇ ಪ್ರಕರಣ ಇರುವುದಿಲ್ಲವೆಂದು ಮೂಲ ಪ್ರಮಾಣ ಪತ್ರವನ್ನು , ವೃತ್ತಿಯ ಬಗ್ಗೆ ತರಬೇತಿ ಪಡೆದ ಪ್ರಮಾಣ ಪತ್ರಗಳಿದ್ದಲ್ಲಿ ಲಗತ್ತಿಸಿ ದಿ.18.02.2020ರ ರೊಳಗೆ ಕಾರ್ಮಿಕ ಅಧಿಕಾರಿ, ದ.ಕ. ಉಪವಿಭಾಗ-1, ಮಂಗಳೂರು , ಭಾರತ್ಬೀಡಿ ಎದುರು ಬಂಟ್ಸ್ ಹಾಸ್ಟೇಲ್, ಮಂಗಳೂರು-575003 ಕಚೇರಿಗೆ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.