ಸುಳ್ಯ ಹವ್ಯಕ ವಲಯದ ಜನವರಿ ತಿಂಗಳ ಶಾಸನತಂತ್ರ ಸಭೆ…

ಸುಳ್ಯ: ಸುಳ್ಯ ಹವ್ಯಕ ವಲಯದ ಪದಾಧಿಕಾರಿಗಳ ಜನವರಿ ತಿಂಗಳ ಮಾಸಿಕ ಸಭೆಯು ಸುಳ್ಯ ಹವ್ಯಕ ವಲಯದ ಮಹಾವಿಷ್ಣು ಘಟಕದ ಗುರಿಕ್ಕಾರರಾದ ಸರವು ಈಶ್ವರ ಭಟ್ ಇವರ ಮನೆಯಲ್ಲಿ ಜ. 5 ರಂದು ರಂದು ನಡೆಯಿತು.

ಧ್ವಜಾರೋಹಣ, ದೀಪೋಜ್ವಲನ, ಶಂಖನಾದ, ಗುರುವಂದನೆ, ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರ ಹಾಗೂ ಗೋಸ್ತುತಿಯೊಂದಿಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು. ಇತ್ತೀಚೆಗೆ ಬೃಂದಾವನಸ್ಥರಾದ ಹಿಂದೂ ಸಮಾಜದ ಶ್ರೇಷ್ಠ ಸಂತ , ಶ್ರೀ ರಾಮಚಂದ್ರಾಪುರ ಮಠದ ಶ್ರೇಯೋಕಾಂಕ್ಷಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಲಯದ ಗೋಪ್ರೇಮಿ ಮುರಂಗಲ್ಲು ವೆಂಕಟ್ರಮಣ ಭಟ್ ಇವರ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ ರಾಮತಾರಕ ಮಂತ್ರ ಜಪಿಸಲಾಯಿತು.
ವಲಯದ ಅಧ್ಯಕ್ಷರಾದ ಈಶ್ವರ ಕುಮಾರ ಉಬರಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ವಿಷ್ಣು ಕಿರಣ ನೀರಬಿದಿರೆ ಪ್ರಾಸ್ತಾವಿಕ ನುಡಿಗಳನ್ನಾಡಿ ಗತ ಸಭೆಯ ವರದಿ ನೀಡಿ ಸಭಾ ನಿರ್ವಹಣೆ ಮಾಡಿದರು.ಕೋಶಾಧಿಕಾರಿ ಸರವು ಈಶ್ವರ ಭಟ್ ಲಕ್ಷ್ಮೀ ಶಾಖೆಯ ಲೆಕ್ಕ ಪತ್ರ ಮಂಡಿಸಿದರು. ವಲಯ ಪದಾಧಿಕಾರಿಗಳು ವಿಭಾಗವಾರು ವರದಿ ಮಂಡಿಸಿದರು.
ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿತ ಗೊಳ್ಳಲಿರುವ ವಿಷ್ಣುಗುಪ್ತ ವಿದ್ಯಾಪೀಠದ ಕುರಿತು ಈಶ್ವರ ಕುಮಾರ ಉಬರಡ್ಕ ಇವರು ಸಮಗ್ರ ಮಾಹಿತಿ ನೀಡಿದರು.
ನಂತರ ಶ್ರೀಮಠದ ಅಂಗಸಂಸ್ಥೆಯಾದ ಸರಳಿ ಕುಂಜ ದಲ್ಲಿರುವ ಧರ್ಮಾರಣ್ಯ ದ ಅಭಿವೃದ್ಧಿ ಸಮಿತಿಯ ಸಭೆಯು ನಡೆಯಿತು. ಅಧ್ಯಕ್ಷರಾದ ಕುಮಾರಸ್ವಾಮಿ, ಕಾರ್ಯದರ್ಶಿಯಾದ ಕೃಷ್ಣ ಮೂರ್ತಿ ಸಭೆಯ ವರದಿಯನ್ನು ನೀಡಿದರು. ಧರ್ಮಾರಣ್ಯದ ಕುರಿತು ಮಾಹಿತಿಯನ್ನು ಸಂಚಾಲಕರಾದ ಗೋಪಾಲಕೃಷ್ಣ ಭಟ್ ತಿಳಿಸಿದರು. ವಿದ್ಯಾ ಸಹಾಯ ಅಪೇಕ್ಷಿತ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯ ನಿಧಿಯನ್ನು ವಿತರಿಸಲಾಯಿತು. ಮಾಣಿ ಮಠದಲ್ಲಿ ಜನವರಿ 26 ರಂದು ನಡೆಯುವ ವಾರ್ಷಿಕೋತ್ಸವ ಮತ್ತು ಸೂತ್ರ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಯಿತು. ಮಾರ್ಚ್ 1 ರಂದು ಗೋಕರ್ಣದ ಅಶೋಕೆಯಲ್ಲಿ ಜರುಗುವ ಸರ್ವ ಸೇವಕ ಸಮಾವೇಶದ ಕುರಿತು ಶ್ರೀ ಗುರುಗಳಿಂದ ಬಂದ ಸುತ್ತೋಲೆಯನ್ನು ತಿಳಿಸಲಾಯಿತು. ಸಿ.ಎ.ಎ ಮತ್ತು ಎನ್.ಆರ್.ಸಿ ಕಾಯ್ದೆಗಳ ಬಗ್ಗೆ ರಾಮಮೋಹನ ಯು.ಎಸ್ ನ್ಯಾಯವಾದಿ ಸುಳ್ಯ ಇವರು ಸಮರ್ಪಕವಾದ ಮಾಹಿತಿಯನ್ನು ನೀಡಿದರು. ಮಂಡಲದ ವೀಕ್ಷಕರಾಗಿ ಮಂಡಲದ ವೈದಿಕ ಪ್ರಧಾನರಾದ ವೆಂಕಟೇಶ ಶಾಸ್ತ್ರಿಗಳು ಹಾಜರಿದ್ದರು ಮಾಹಿತಿಯನ್ನು ನೀಡಿದರು.ವಲಯದ 11 ಪದಾಧಿಕಾರಿಗಳು 8 ಗುರಿಕಾರರು ಮತ್ತು ಹವ್ಯಕ ಬಂಧುಗಳು ಸೇರಿದಂತೆ ಸುಮಾರು 36 ಜನ ಗುರು ಭಕ್ತರು ಹಾಜರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button