ಶಾಲಾ ಕಾಲೇಜುಗಳಲ್ಲಿ ಸೂರ್ಯಗ್ರಹಣ ವೀಕ್ಷಣೆ, ಮಾಹಿತಿ ಸಂವಾದ …
ಪುತ್ತೂರು: ಪುತ್ತೂರಿನ ಹಾರಾಡಿ ಸರ್ಕಾರಿ ಉನ್ನತ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಸೇರರಿದಂತೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಸೂರ್ಯ ಗ್ರಹಣದ ಬಗ್ಗೆ ಮಾಹಿತಿ ಕಾರ್ಯಕ್ರಮ ಹಾಗೂ ಗ್ರಹಣ ವೀಕ್ಷಣೆ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳೂ ಸೋಲಾರ್ ಫಿಲ್ಟರ್ ಕನ್ನಡಕ ಇನ್ನಿತರ ಸಾಧನಗಳ ಮೂಲಕ ಗ್ರಹಣ ವೀಕ್ಷಣೆ ಮಾಡಿದರು.
ಹಾರಾಡಿ ಶಾಲಾ ಮಕ್ಕಳಿಗೆ ರಂಗಕರ್ಮಿ ಐಕೆ ಬೊಳುವಾರು ಮತ್ತು ಉಪನ್ಯಾಸಕ ಡಾ. ಎಂ. ಶ್ರೀಶಕುಮಾರ್ ಅವರು ಗ್ರಹಣದ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ಸಂವಾದ ನಡೆಸಿ ಮಾಹಿತಿ ನೀಡಿದರು. ಸೋಲಾರ್ ಕನ್ನಡದ ಮೂಲಕ ವಿದ್ಯಾರ್ಥಿಗಳು ಗ್ರಹಣದ ವಿವಿಧ ಹಂತಗಳನ್ನು ನೋಡಿ ಮಾಹಿತಿ ಪಡೆದುಕೊಂಡರು. ಅಲ್ಲದೆ ಕನ್ನಡಿ ಬಿಂಬದ ಮೂಲಕ ಸೂರ್ಯನ ತೀವ್ರ ಬೆಳಕು ಮತ್ತು ಮಂದ ಬೆಳಕಿನ ಪ್ರತಿಬಿಂಬಗಳ ಅರಿವು ಪಡೆದುಕೊಂಡರು.
ಸೂರ್ಯಗ್ರಹಣದ ಹಿನ್ನಲೆಯಲ್ಲಿ ಪುತ್ತೂರು ನಗರದಲ್ಲಿ ಖಾಸಗಿ ವಾಹನ ಹಾಗೂ ಜನಸಂಖ್ಯೆ ವಿರಳವಾಗಿತ್ತು.