ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ಶಿಕ್ಷಕರಿಗೆ ಸನ್ಮಾನ…

ಸುಳ್ಯ: ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ಸೆ.05 ಶಿಕ್ಷಕರ ದಿನಾಚರಣೆಯಂದು ಹಿರಿಯ ಶಿಕ್ಷಕರಾದ ಪುಂಗವ ಮಾಸ್ತರ್ ಹಾಗೂ ಅವರ ಸಹೋದರಿ ಗಂಗಮ್ಮ ಟೀಚರ್ ಇವರನ್ನು ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಮಾಸಿಕ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರಾದ ಪಿ.ಬಿ ಸುಧಾಕರ ರೈ, ಪ್ರಧಾನ ಕಾರ್ಯದರ್ಶಿ ಬಿ.ಎಸ್ ಗಿರೀಶ್ ಹಾಗೂ ನಿರ್ದೇಶಕರುಗಳಾದ ಧರ್ಮಪಾಲ ಕುರುಂಜಿ, ಸ್ಯಾನ್ ಸಿಂಗ್, ಅನೂಪ್ ಹಾಗೂ ಅಂಜಲಿ ಮೋಂಟೇಸ್ಸರಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಗೀತಾಂಜಲಿ ಹಾಗೂ ವರ್ತಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
