ಬ್ರಹ್ಮಕಲಶೋತ್ಸವ ಸಮಿತಿ ರಚನೆ…
ಬಂಟ್ವಾಳ: ಜೂನ್ 2 , 3 ಮತ್ತು 4 ರಂದು ನಡೆಯಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ ಇದರ ಬ್ರಹ್ಮಕಲಶೋತ್ಸವದ ಸಮಿತಿಯ ಅಧ್ಯಕ್ಷರಾಗಿ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಜಯಶಂಕರ ಬಾಸ್ರಿತಾಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮೂರು ದಿನಗಳ ಪರ್ಯಂತ ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ವಿದ್ಯುಕ್ತವಾಗಿ ಬ್ರಹ್ಮಕಲಶೋತ್ಸವ ಜರಗಲಿದೆ. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತಾಯ, ಸಮಿತಿಯ ಪದಾಧಿಕಾರಿಗಳಾಗಿ ಸಂತೋಷ್ ಕುಮಾರ್ ಶೆಟ್ಟಿ ದಳoದಿಲ, ಅರವಿಂದ ಭಟ್ ಆಲಾಡಿ, ಯಶವಂತ ದೇರಾಜೆ, ದೇವಿ ಪ್ರಸಾದ್ ಪೂಂಜಾ, ಚರಣ್, ಸೂರ್ಯನಾರಾಯಣ ಭಟ್, ಗಂಗಾಧರ ಬಂಡಾರಿ, ವಾಸು ಗಟ್ಟಿ, ಸದಾನಂದ ಭಟ್, ಎನ್ ಕೆ ಶಿವ, ಚಂದ್ರಶೇಖರ ಗಟ್ಟಿ, ಲೋಕಯ್ಯ, ಚಂದ್ರಶೇಖರ್, ನರೇಂದ್ರ ಆಳ್ವ, ಪುರಂದರ, ಡಾ ಜಯಪ್ರಕಾಶ್ ಮಯ್ಯ , ಪ್ರಭಾಕರಆಳ್ವ, ಮೊದಲಾದವರನ್ನು ಸರ್ವಾನುಮತದಿಂದ ಆರಿಸಲಾಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ ಕೃಷ್ಣ ಶಾಮ್ ಸರ್ವರನ್ನು ಸ್ವಾಗತಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ಗೀತೇಶ್ ಗಟ್ಟಿ ಧನ್ಯವಾದ ನೀಡಿದರು. ಸದಸ್ಯರಾದ ಬಿ ಕೇಶವ ಭಟ್, ಸಂತೋಷ್, ಗಣೇಶ್ ಕುಲಾಲ್, ಪ್ರಮೀಳಾ ಗಟ್ಟಿ, ಕುಸುಮ, ನಾರಾಯಣ ಐತಾಳ, ಮನೋಜ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.