ಟಿ. ಎಂ. ಶಹೀದ್ ತೆಕ್ಕಿಲ್ ಜಾತ್ಯತೀತ ನಾಯಕ-ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ದಲ್ಲಿ ಕಾವು ಹೇಮನಾಥ್ ಶೆಟ್ಟಿ…

ಸುಳ್ಯ: ಕರ್ನಾಟಕ ಸರ್ಕಾರದಿಂದ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ರಾಗಿ ನೇಮಕ ಗೊಂಡ ಟಿ. ಎಂ. ಶಹೀದ್ ತೆಕ್ಕಿಲ್ ರವರಿಗೆ ವಿವಿಧ ಕಾರ್ಮಿಕ ಸಂಘಟನೆಗಳು, ಮತ್ತು ಸಂಘ ಸಂಸ್ಥೆ ಗಳ ವತಿಯಿಂದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಜರಗಿತು.
ಅಧ್ಯಕ್ಷ ತೆಯನ್ನು ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ವಹಿಸಿದ್ದರು.
ಪುತ್ತೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಟಿ. ಎಂ. ಶಹೀದ್ ನಿಜವಾದ ಜಾತ್ಯತೀತ ನಾಯಕ ಅವರ ಸೈದ್ದಾಂತಿಕ ಬದ್ಧತೆ ನಿಜಕ್ಕೂ ಶ್ಲಾಘನೀಯ ಅದಕ್ಕೆ ಇಂದಿನ ಅಭಿನಂದನಾ ಸಮಾರಂಭ ಸಾಕ್ಷಿ ಎಂದರು.
ನೆಹರೂ ಸ್ಮಾರಕ ಕಾಲೇಜು ವಿಶ್ರಾಂತ ಪ್ರಾoಶುಪಾಲ, ಖ್ಯಾತ ಬರಹಗಾರ ಡಾ. ಪ್ರಭಾಕರ್ ಶಿಶಿಲ ಅಭಿನಂದನಾ ಭಾಷಣ ಮಾಡಿದರು. ಮೈಸೂರು ಶ್ರೀ ಧರ್ಮಸ್ಥಳ ಮಹಿಳಾ ಕಾಲೇಜು ವಿಶ್ರಾಂತ ಪ್ರಾoಶುಪಾಲ ಪ್ರೊ ದಾಮೋದರ್ ಗೌಡ ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಮೈಸೂರು ಮಹಾರಾಣಿ ಕಾಲೇಜು ವಿಶ್ರಾಂತ ಪ್ರಾoಶುಪಾಲ ಪ್ರೊ. ಬಾಲಚಂದ್ರ ಗೌಡ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ. ಆರ್. ಗಂಗಾಧರ್, ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸುಳ್ಯ ಎ ಪಿ ಎಂ. ಸಿ ಕಾರ್ಯದರ್ಶಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್, ದ. ಕ. ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘ ದ ಅಧ್ಯಕ್ಷ ಚಂದ್ರ ಕೋಲ್ಚಾರ್, ಡಾ. ರಘು, ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ. ಎಂ ಮಹಮ್ಮದ್, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅಶೋಕ್ ಎಡಮಲೆ ಅಡಿಕೆ ವರ್ತಕರ ಸಂಘದ ಮಾಜಿ ಅಧ್ಯಕ್ಷ ಆದo ಹಾಜಿ ಕಮ್ಮಾಡಿ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಸದಸ್ಯ ಅಡ್ವೋಕೇಟ್ ಅಬೂಬಕ್ಕರ್ ಅಡ್ಕಾರ್ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ರಾಧಾ ಕೃಷ್ಣ ಬೊಳ್ಳೂರು ಮೊದಲಾದವರು ಉಪಸ್ಥಿತರಿದ್ದರು
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸ್ವಾಗತಿಸಿ ಪ್ರಸ್ತಾವನೆ ಮಾಡಿದರು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಟಿ. ವಿಶ್ವನಾಥ್ ವಂದಿಸಿದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಕಾರ್ಯಕ್ರಮ ನಿರೂಪಿಸಿದರು.

whatsapp image 2025 10 15 at 9.02.07 pm

Related Articles

Back to top button