ಟಿ.ಎಂ ಶಹೀದ್ ತೆಕ್ಕಿಲ್ ರಿಗೆ ಸುಳ್ಯದಲ್ಲಿ ಸಾರ್ವಜನಿಕ ಸನ್ಮಾನ…

ಜನರ ಪ್ರೀತಿ, ವಿಶ್ವಾಸ ಗಳಿಸಿದ ಜಾತ್ಯಾತೀತ ನಾಯಕ ಟಿ.ಎಂ ಶಹೀದ್: ಸಚಿವ ದಿನೇಶ್ ಗುಂಡೂರಾವ್...

ಸುಳ್ಯ: ಟಿ.ಎಂ ಶಹೀದ್ ರವರು ಇಲ್ಲಿಯ ಜನರ ಪ್ರೀತಿ, ವಿಶ್ವಾಸ ಗಳಿಸಿರುವ ಜಾತ್ಯಾತೀತ ನಾಯಕ. ಅವರಿಗೆ ರಾಜಕೀಯವಾಗಿ ಉನ್ನತ ಸ್ಥಾನ ಸಿಗಲಿ. ಸಮಾಜಕ್ಕೆ ಇನ್ನಷ್ಟು ಸೇವೆ ಅವರಿಂದ ದೊರೆಯುವಂತಾಗಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜು.6ರಂದು ಸುಳ್ಯದ ಬಂಟರ ಭವನದಲ್ಲಿ ನಡೆದ ಸಾಮಾಜಿಕ ಧುರೀಣ ಟಿ.ಎಂ ಶಹೀದ್ ತೆಕ್ಕಿಲ್ ರವರ ಸಾರ್ವಜನಿಕ ಸನ್ಮಾನ ಕಾರ್ಯಕ್ರಮದಲ್ಲಿ ಅಡಿಕೆ ಗಿಡಕ್ಕೆ ನೀರೆರೆದು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಸಾಮಾಜಿಕ, ರಾಜಕೀಯ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯಿಂದ ಶಹೀದ್ ಜನರ ಪ್ರೀತಿ ಗಳಿಸಿದ್ದಾರೆ. ರಾಷ್ಟ್ರ ಮಟ್ಟದ ಎಲ್ಲ ನಾಯಕರ ಸಂಪರ್ಕ ಇದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯ ತನಕ ಉತ್ಸಾಹದಿಂದ ಓಡಾಟ ಮಾಡಿ ಪಕ್ಷ ಸಂಘಟನೆ ಮಾಡುತ್ತಾರೆ. ಎಲ್ಲ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಇವರನ್ನು ಸಾರ್ವಜನಿಕವಾಗಿ ಸನ್ಮಾನಿಸುತ್ತಿರುವುದು ನನಗೆ ಸಂತೋಷ ತಂದಿದೆ ಎಂದ ಸಚಿವರು, “ಸುಳ್ಯ ತಾಲೂಕು ಆಸ್ಪತ್ರೆ ಹಾಗೂ ಅರಂತೊಡು ಆಸ್ಪತ್ರೆಗೆ ವಿವಿಧ ಬೇಡಿಕೆಯನ್ನು ಶಹೀದ್ ರವರು ಮುಂದಿಟ್ಟಿದ್ದಾರೆ. ಅವರ ಬೇಡಿಕೆಯನ್ನು ಈಡೇರಿಸುತ್ತೇವೆ” ಎಂದು ಹೇಳಿದರು.
ಸರಕಾರ ಮಟ್ಟದಲ್ಲಿ ಸ್ಥಾನ ಸಿಗಲಿ:
ಕರ್ನಾಟಕ ಸರಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಮ್ ಅಹಮ್ಮದ್ ರವರು ಅಭಿನಂದನಾ ಸಂಚಿಕೆ ಬಿಡುಗಡೆ ಮಾಡಿದರು. “ಕೈಯಲ್ಲಿ ದೊಡ್ಡ ಸ್ಥಾನಗಳು ಇಲ್ಲದಿದ್ದರೂ ಸಮಾಜ ಕಟ್ಟುವ ನಾಯಕನಾಗಿ ಶಹೀದ್ ರವರು ತೊಡಗಿಸಿಕೊಂಡಿದ್ದಾರೆ. ಎಲ್ಲ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಶಹೀದ್ ನನಗೆ ಅತ್ಯಾಪ್ತರು. ಅವರೊಬ್ಬ ಅಪರೂಪದ ರಾಜಕಾರಣಿ. 35 ವರ್ಷಗಳಿಂದ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯರಾಗಿರುವ ಟಿ.ಎಂ ಶಹೀದ್ ಅವರಿಗೆ ಸರಕಾರದ ಮಟ್ಟದಲ್ಲಿ ಉತ್ತಮ ಸ್ಥಾನ ಸಿಗಬೇಕಾಗಿದೆ. ಅದಕ್ಕಾಗಿ ನಾನು ಅವರ ಪರವಾಗಿ ದ್ವನಿ ಎತ್ತುತ್ತೇನೆ” ಎಂದು ಹೇಳಿದರು.
ಎಲ್ಲರೊಂದಿಗೆ ಬೆರೆಯುವ ಗುಣ ಶಹೀದ್ ಅವರದ್ದು:
ಟಿ.ಎಂ ಶಹೀದ್ ರವರ ಕುರಿತು ಗಾಯಕಿ ಸಂದ್ಯಾ ಮಂಡೆಕೋಲುರವರು ಹಾಡಿದ ಗಾಯನವನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರುರವರು ಬಿಡುಗಡೆಗೊಳಿಸಿ,” ಟಿ.ಎಮ್ ಶಹೀದ್ ರನ್ನು ನಾನು 35 ವರ್ಷಗಳಿಂದಲೂ ತಿಳಿದವನು. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡ ಅವರು ಎಲ್ಲರೊಂದಿಗೂ ಬೆರೆತು ಮುನ್ನಡೆಯುವವರು” ಎಂದು ಹೇಳಿದರು.
ಶಹೀದ್ ರಿಗೆ ದೊಡ್ಡ ಸ್ಥಾನ ಸಿಗಲಿ
ಅಭಿನಂದನಾ ಭಾಷಣ ಮಾಡಿದ ಲಯನ್ ಜಿಲ್ಲಾ ಮಾಜಿ ರಾಜ್ಯಪಾಲ ಎಂ.ಬಿ.ಸದಾಶಿವರವರು, “ ಜಾತಿ, ಧರ್ಮ, ಪಕ್ಷ ಮೀರಿ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಟಿ.ಎಂ ಶಹೀದ್ ರವರು. ತನ್ನಲ್ಲಿ ಅಧಿಕಾರದ ಬಲವಿಲ್ಲದಿದ್ದರೂ ಸ್ನೇಹದ ಬಲದಿಂದ ಎಲ್ಲರ ಪ್ರೀತಿ ಗಳಿಸಿದ್ದಾರೆ. 5 ಕೋಟಿ ಅನುದಾನವನ್ನು ಸರಕಾರದಿಂದ ತರಿಸಿ ಪೇರಡ್ಕದಲ್ಲಿ ಸೇತುವೆ ಮಾಡಿದ್ದಾರೆ. ಇನ್ನಿತರ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಅಭಿವೃದ್ಧಿ ಮಾಡಲು ಎಂ.ಎಲ್.ಎ ಆಗಬೇಕೆಂದಿಲ್ಲ ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ. 35 ವರ್ಷದಿಂದ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಶಹೀದ್ ದೊಡ್ಡ ಮಟ್ಟದ ಸ್ಥಾನ ಸಿಗುವಂತೆ ಸಚಿವರು ಮಾಡಬೇಕು ಎಂದು ಹೇಳಿದರು.
ಶಹೀದ್ ಹಂತ ಹಂತವಾಗಿ ಬೆಳೆದವರು:
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ”ಟಿ.ಎಂ ಶಹೀದ್ ಕಾಂಗ್ರೇಸ್ ಪಕ್ಷದ ಕಾರ್ಯಕರ್ತನಾಗಿ ಹಂತ ಹಂತವಾಗಿ ಬೆಳೆದು ಬಂದವರು. ಎಲ್ಲ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಜನರ ಪ್ರೀತಿ ವಿಶ್ವಾಸ ಗಳಿಸಿದವರು. ಒಂದು ಸಮುದಾಯದ ಜತೆ ಗುರುತಿಸಿದ್ದರೂ ಎಲ್ಲ ಸಮುದಾಯದ ಪ್ರೀತಿಯನ್ನು ಗಳಿಸಿದವರು. ಸಾಮಜಿಕ ಕ್ಷೇತ್ರದಲ್ಲಿ ತಾವು ಸಲ್ಲಿಸಿದ ಸೇವೆಗಾಗಿ ತಮ್ಮನ್ನು ಸನ್ಮಾನಿಸಲಾಗಿದೆ. ಈ ಸನ್ಮಾನ ತಮಗೆ ಇನ್ನಷ್ಟು ಸಮಾಜಮುಖಿಯಾಗಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿ” ಎಂದು ಹೇಳಿದರು.
55 ಸೇವಾ ಚಟುವಟಿಕೆಗಳಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್ ಚಾಲನೆ ನೀಡಿದರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಟಿ.ಎಂ ಶಹೀದ್ ಅಭಿನಂದನಾ ಸಮಿತಿಯ ಅಧ್ಯಕ್ಷ ಸದಾನಂದ ಮಾವಾಜಿ ಅಧ್ಯಕ್ಷತೆ ವಹಿಸಿ “ಶಹೀದ್ ರವರು ಎಲ್ಲರೊಂದಿಗೆ ಬೆರೆಯುವವರು. ಎಲ್ಲ ಧರ್ಮದವರು ಸೇರಿ ಅವರನ್ನು ಸಾರ್ವಜನಿಕವಾಗಿ ಅಭಿನಂಧಿಸಿದ್ದೇವೆ” ಎಂದು ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ ಮುಖ್ಯ ಅತಿಥಿಗಳಾಗಿದ್ದರು. 55 ಯೋಜನೆಗಳಿಗೆ ಸಮಾರಂಭದಲ್ಲಿ ಚಾಲನೆ ನೀಡಿದರಲ್ಲದೆ, ತಾತ್ಕಾಲಿಕವಾಗಿ ಸಮಾರಂಭದಲ್ಲಿ ವಿತರಿಸಲಾಯಿತು.
ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡ ಸದಾನಂದ ಮಾವಾಜಿಯವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಫವಾಜ್, ಕೋಶಾಧಿಕಾರಿ ತಾಜ್ ಮಹಮ್ಮದ್ ಸಂಪಾಜೆ ಮೊದಲಾದವರಿದ್ದರು.
ಅಭಿನಂದನಾ ಸಮಿತಿಯ ಸಂಚಾಲಕ ಕೆ.ಟಿ.ವಿಶ್ವನಾಥ ಸ್ವಾಗತಿಸಿದರು. ಕೆ.ಆರ್ ಗೋಪಾಲಕೃಷ್ಣ ಆಶಯ ಗೀತೆ ಹಾಡಿದರು. ದಿನೇಶ್ ಮಡಪ್ಪಾಡಿ ಸನ್ಮಾನ ಪತ್ರ ವಾಚಿಸಿದರು. ಕೆ.ಎಂ ಮುಸ್ತಫ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮಕ್ಕೂ ಮೊದಲು ಗಾಂಧಿನಗರ ಪೆಟ್ರೋಲ್ ಬಂಕ್ ಬಳಿಯಿಂದ ವಾಹನ ಜಾಥಾ ನಡೆಯಿತು.
ಎಲ್ಲರೂ ಪ್ರೀತಿಯಿಂದ ನನ್ನನ್ನು ಬೆಳೆಸಿದ್ದಾರೆ:
. ಸನ್ಮಾನ ಸ್ವೀಕರಿಸಿದ ಟಿ.ಎಂ ಶಹೀದ್ ರವರು ಸಾರ್ವಜನಿಕ ಸನ್ಮಾನ ಮಾಡಲು ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ತಮ್ಮ ಬಾಲ್ಯ ಜೀವನ, 1988 ರಿಂದ ವಿದ್ಯಾಬ್ಯಾಸದ ಬಳಿಕ ಹೋರಾಟದ ಮೂಲಕ ತಾನು ಬೆಳೆದು ಬಂದ ಕುರಿತು ವಿವರಿಸಿದರು. ನನ್ನ ಸಮುದಾಯದ ಮಾತ್ರವಲ್ಲದೇ ಇತರ ಸಮುದಾಯವರು ನನ್ನನ್ನು ತಮ್ಮವನೆಂದು ನೋಡಿ, ಪ್ರೀತಿಯಿಂದ ಬೆಳೆಸಿದ್ದಾರೆ. ಇದರಿಂದಾಗಿ ಸಮಾಜ ಸೇವೆ ಮಾಡಲು ಒಂದಷ್ಟು ಸಾಧ್ಯವಾಯಿತು ಪೇರಡ್ಕ, ಅರಂತೋಡು ಮಸೀದಿಗಳಿಗೆ ಅನುದಾನ, ಮಂದಿರಗಳಿಗೆ ಅನುದಾನ ತರಿಸಿದ್ದೇನೆ. ಪೇರಡ್ಕದಲ್ಲಿ ಸೇತುವೆಗೆ ಅನುದಾನ ಸರಕಾರ ನೀಡಿದೆ” ಎಂದು ಹೇಳಿದರು.
ಏಕಾಏಕಿಯಾಗಿ ನನಗೆ ಈ ಸ್ಥಾನಗಳು ಬಂದುದಲ್ಲ. ಸುಧೀರ್ಘ 36 ವರ್ಷಗಳ ಹೋರಾಟದಿಂದ ಈ ರೀತಿಯ ಅವಕಾಶಗಳು ದೊರೆಯಿತು. 34 ವರ್ಷಗಳಿಂದಲೇ ನಾನು ಎಲ್ಲ ನಾಯಕರ ಜತೆ ಸ್ನೇಹ ಹೊಂದಿದ್ದೇನೆ. ಯಾರ ಹೆಸರನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಇನ್ನೊಬ್ಬರ ಹೆಸರು ಹೇಳಿ ನಾನು ದುಡ್ಡುಮಾಡಿಲ್ಲ. ಹಲವರಿಗೆ ಸಹಾಯ ಮಾಡಿದ್ದೇನೆ, ನೆರವು ನೀಡಿದ್ದೇನೆ, ತೃಪ್ತಿ ಇದೆ. ಡಾ| ಕುರುಂಜಿಯವರ ಪ್ರೇರಣೆಯಿಂದ ಗೂನಡ್ಕದಂತ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಹುಟ್ಟು ಹಾಕಿ. ಸಮಾಜಕ್ಕಾಗಿ ಎಲ್ಲವನ್ನು ಮಾಡಿದ್ದೇನೆ. ನನ್ನಿಂದ ತಪ್ಪುಗಳಾಗಿದೆ ಎಂದು ಯಾರಾದರೂ ಹೇಳಿದರೆ ತಿದ್ದಿ ನಡೆದಿದ್ದೇನೆ ಎಂದ ಟಿ.ಎಂ ಶಹೀದ್ ರವರು, 36 ವರ್ಷ ನಾನು ಪಕ್ಷದಲ್ಲಿ ದುಡಿದಿರುವುದಕ್ಕೆ ನನಗೆ ಸಿಕ್ಕಿದ್ದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಮಾತ್ರ. ನನ್ನ ಬಳಿಕ ಬಂದವರು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಆದರೂ ಅಸೂಯೆ ಪಟ್ಟವನಲ್ಲ ಎಂದು ಹೇಳಿದರು.
“ ಅಭಿನಂದನಾ ಕಾರ್ಯಕ್ರಮದಲ್ಲಿ ಸುಮಾರು 60 ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
• ವಿವಿಧ ಶಾಲೆಗಳಿಗೆ, ಯುವಕ ಮಂಡಲಗಳಿಗೆ, ಭಜನೆ ತಂಡಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಸವಲತ್ತು ವಿತರಣೆ ನಡೆಯಿತು.
• ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಸಚಿವರು ಮತ್ತು ಶಾಸಕರು ಕಳುಹಿಸಿದ ಶುಭ ಹಾರೈಕೆ ಪತ್ರ ಸಮಾರಂಭದಲ್ಲಿ ವಾಚಿಸಲಾಯಿತು.
• 55 ಸಮಾಜ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
• ಟಿ.ಎಂ ಶಹೀದ್ ಅವರ ಭಾವಚಿತ್ರ ಇರುವ ಅಂಚೆ ಇಲಾಖೆಯ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು.
• ಅಭಿನಂದನಾ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
• ಕೇರಳ ಪ್ರಖ್ಯಾತ ರಸಮಂಜರಿ ತಂಡದಿಂದ ಕನ್ನಡ, ಮಲಯಾಳಂ, ಹಿಂದಿ ಭಾಷೆಗಳ ರಸಮಂಜರಿ ಕಾರ್ಯಕ್ರಮ ನಡೆಯಿತು.
• ಜಾತಿ, ಮತ ಬೇದವಿಲ್ಲದೆ ಸಾವಿರಾರು ಮಂದಿ ಭಾಗವಹಿಸಿದ್ದರು.

whatsapp image 2024 07 10 at 12.36.41 pm

whatsapp image 2024 07 10 at 12.36.39 pm

whatsapp image 2024 07 10 at 12.36.42 pm

whatsapp image 2024 07 10 at 12.36.41 pm (1)

Sponsors

Related Articles

Back to top button