ಪುತ್ತೂರು ಸಂಪರ್ಕ ರಸ್ತೆಗೆ ದಿ. ಸುಧಾಕರ ಶೆಟ್ಟಿ ಪುತ್ತೂರು ಇವರ ಹೆಸರಿಡುವಂತೆ ಮನವಿ ಸಲ್ಲಿಕೆ…

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಬಂಟ್ವಾಳ ಕೇಂದ್ರ ಸಮಿತಿ ಮತ್ತು ಪುತ್ತೂರು ತಾಲೂಕು ಘಟಕದ ವತಿಯಿಂದ ಪ್ರತಿಷ್ಠಾನದ ಅಧ್ಯಕ್ಷರಾದ ಕಯ್ಯಾರು ನಾರಾಯಣ ಭಟ್ ನೇತೃತ್ವದಲ್ಲಿ ಪುತ್ತೂರು ಕೆ.ಎಸ್. ಆರ್ ಟಿ. ಸಿ .ಬಸ್ ಸ್ಟ್ಯಾಂಡ್ ನಿಂದ ಖಾಸಗಿ ಬಸ್ ನಿಲ್ದಾಣದ ಸಂಪರ್ಕ ರಸ್ತೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ, ಸಾಮಾಜಿಕ ಮುಂದಾಳು ದಿ.ಸುಧಾಕರ್ ಶೆಟ್ಟಿ ಇವರ ಹೆಸರನ್ನು ಇಡುವಂತೆ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರು , ಮಾನ್ಯ ಶಾಸಕರು ಪುತ್ತೂರು ಮತ್ತು ಪೌರಾಯುಕ್ತರು ಇವರಿಗೆ ನ. 15 ರಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷರುಗಳಾದ ಜಯರಾಮ ಭಂಡಾರಿ ಧರ್ಮಸ್ಥಳ ,ದುಗ್ಗಪ್ಪ.ಯನ್ , ಸದಸ್ಯರಾದ ಅನಾರು ಕೃಷ್ಣಶರ್ಮ ಮತ್ತು ಪುತ್ತೂರು ಘಟಕದ ಪದಾಧಿಕಾರಿಗಳಾದ ಮಹಾಬಲ ರೈ ಒಳತಡ್ಕ ಚಂದ್ರಶೇಖರ ಆಳ್ವ ಪಡುಮಲೆ, ಭವಾನಿ ಶಂಕರ ಶೆಟ್ಟಿ ಪುತ್ತೂರು ಹಾಗೂ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರಾದ ನ್ಯಾಯವಾದಿ ಜಗನ್ನಿವಾಸ ರಾವ್ ಪುತ್ತೂರು ಉಪಸ್ಥಿತರಿದ್ದರು.

Sponsors

Related Articles

Back to top button