ದ. 1 – ಕೈರಂಗಳದಲ್ಲಿ ಅ.ಭಾ.ಸಾ.ಪ ಸಾಹಿತ್ಯ ಸಮಾವೇಶ…
ಬಂಟ್ವಾಳ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಸಮಿತಿಯ ವತಿಯಿಂದ ಸಾಹಿತ್ಯ ಸಮಾವೇಶ ಕಾರ್ಯಕ್ರಮವು ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ದಶಂಬರ 1 ರಂದು ನಡೆಸುವುದೆಂದು ನಿರ್ಣಯಿಸಲಾಯಿತು.
ಒಂದು ದಿನದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಹಿತ್ಯಾಭಿಮಾನಿಗಳು ಪೂರ್ಣ ಸಹಕಾರ ನೀಡಬೇಕೆಂದು ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜರಾಮ ಭಟ್ ತಿಳಿಸಿದರು. ನ.17 ರಂದು ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಸಲಹೆ ಸೂಚನೆಗಳನ್ನಿತ್ತರು.
ಸಮ್ಮೇಳನದಲ್ಲಿ ಕವಿ ಸಾಹಿತಿಗಳಿಗೆ ಬಹುಭಾಷಾ ಸಾಹಿತ್ಯ ಪ್ರಸ್ತುತಿ ಹಾಗೂ ವಿವಿಧ ಗೋಷ್ಟಿಗಳನ್ನು ಏರ್ಪಡಿಸಲಾಗುವುದು. ಸಾಹಿತ್ಯ ಕೇಂದ್ರಿತ ಗೋಷ್ಟಿಗಳಲ್ಲಿ ರಾಷ್ಟ್ರೀಯ ಚಿಂತನೆಯ ಉಪನ್ಯಾಸಗಳಿರುವುದು ಹಿರಿಯ ಸಾಹಿತಿಯೊಬ್ಬರ ಸರ್ವಾಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ ಎಂದು ಅ.ಭಾ.ಸಾ.ಪ. ತಾಲೂಕು ಸಮಿತಿ ಅಧ್ಯಕ್ಷ ಡಾ. ಸುರೇಶ ನೆಗಳಗುಳಿ ತಿಳಿಸಿದರು.
ಸಮ್ಮೇಳನದನ ರೂಪುರೇಷೆಯ ಬಗ್ಗೆ ಅ.ಭಾ.ಸಾ.ಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ದಿನದ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗಾಗಿ ಕವನ ವಾಚನ, ದೇಶಭಕ್ತಿ ಗೀತೆ , ರಸಪ್ರಶ್ನೆ ,ಪೌರಾಣಿಕ ಪಾತ್ರಗಳ ನಿರೂಪಣೆ, ವಿದಾರ್ಥಿ ಕವಿಗೋಷ್ಟಿ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಸಂಯೋಜಿಸಲಾಗುವುದು ಎಂದು ವಿವರ ನೀಡಿದರು.
ವೇದಿಕೆಯಲ್ಲಿ ಅ.ಭಾ.ಸಾ.ಪ. ಉಪಾಧ್ಯಕ್ಷ ಈಶ್ವರ ಪ್ರಸಾದ ಕನ್ಯಾನ , ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ , ಕೋಶಾಧಿಕಾರಿ ಪ್ರಶಾಂತ ಕಡ್ಯ ಕಲ್ಲಡ್ಕ , ಉಪಸ್ಥಿತರಿದ್ದರು.
ವಿದ್ಯಾಕೇಂದ್ರದ ಪ್ರಾಂಶುಪಾಲ ಶ್ರೀ ಹರಿ ಮಾರ್ಗದರ್ಶನದಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಉಪ ಪ್ರಾಂಶುಪಾಲೆ ರಮಣಿ ಭಂಡಾರಿ , ಕೈರಂಗಳ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಡಿ. ಲಮಾಣಿ ಉಪಸ್ಥಿತರಿದ್ದು ಸಲಹೆಗಳನ್ನಿತ್ತರು.