ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ…

ಪುತ್ತೂರು: ಕುಟುಂಬ ಸಮೇತರಾಗಿ ಪವಿತ್ರ ಉಮ್ರಾ ಯಾತ್ರೆಗೆ ತೆರಳಲಿರುವ ಪುತ್ತೂರು ಸಯ್ಯದ್ ಮಲೆ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಪುತ್ತೂರು ನೋಟರಿ, ನ್ಯಾಯವಾದಿ, ದ. ಕ ಜಿಲ್ಲಾ ವಕ್ಫ್ ಸಮಿತಿ ಸದಸ್ಯ ನೂರುದ್ದೀನ್ ಸಾಲ್ಮರ ಅವರನ್ನು ಸುಳ್ಯದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಕೆ. ಎಂ.ಮುಸ್ತಫಾ, ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಮಾಜಿ ಸದಸ್ಯರಾದ ಎಸ್ ಸಂಸುದ್ದೀನ್, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಕೆ. ಎಸ್. ಉಮ್ಮರ್,ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹಮೀದ್ ಕುತ್ತಮೊಟ್ಟೆ, ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರಾದ ಹಮೀದ್ ಜನತಾ ಮೊದಲಾದವರು ಉಪಸ್ಥಿತರಿದ್ದರು.