ಶಾಂತಾ ಪುತ್ತೂರುರವರಿಗೆ ಸೌರಭ ರತ್ನ ರಾಜ್ಯ ಪ್ರಶಸ್ತಿ…

ಮಂಗಳೂರು: ಕಥಾಬಿಂದು ಪ್ರಕಾಶನ ಮಂಗಳೂರು ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯ ದಲ್ಲಿ ಸಾಹಿತ್ಯ ಸಂಭ್ರಮ 2024 ಮೇ.26ರಂದು ಭಾರತಿ ಶಾಲೆ ಮುಡಿಪುವಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಬೊಳುವಾರು ನಿವಾಸಿ ಶಾಂತಾ ಪುತ್ತೂರುರವರಿಗೆ ಸೌರಭ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯುಗಪುರುಷ ಸಂಪಾದಕರಾದ ಶ್ರೀ ಭುವನಾಭಿರಾಮ ಉಡುಪರು ಕಾರ್ಯಕ್ರಮ ಉದ್ಘಾಟಿಸಿದರು.ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾಜಿ ರಾಜ್ಯಾಧ್ಯಕ್ಷ ರು ಕ.ಸಾ.ಪ.ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಶ್ರೀಮತಿ ಬಿ.ಸತ್ಯವತಿ ಎಸ್ ಭಟ್ ಕೊಳಚಪ್ಪು, ಪಿ.ವಿ.ಪ್ರದೀಪ್ ಕುಮಾರ್ ಕಥಾಬಿಂದು ಪ್ರಕಾಶನ, ಪ್ರೊ.ವಿ.ಕೃಷ್ಣಮೂರ್ತಿ ಪ್ರಾಂಶುಪಾಲರು ಗೋವಿಂದದಾಸ್ ಕಾಲೇಜು ಸುರತ್ಕಲ್, ಹಿರಿಯ ಸಾಹಿತಿ ಗಳಾದ ಶ್ರೀ ಜಯಾನಂದ ಪೆರಾಜೆ,ಶ್ರೀ.ಎನ್.ಸುಬ್ರಾಯ ಭಟ್ ಮಂಗಳೂರು,ಶ್ರೀ ಕೊಡಕ್ಕಲ್ಲು ಸುಬ್ರಹ್ಮಣ್ಯ ಭಟ್ ಸಂಚಾಲಕರು ಶ್ರೀ ಭಾರತಿ ಶಾಲೆ ಮುಡಿಪು,ಶ್ರೀ ನಾಟಕ ಭಾರ್ಗವ ಕೆಂಪರಾಜು ನಿವೃತ್ತ ಉಪನ್ಯಾಸಕರು ಮೈಸೂರು,ಅನಂತ ಎಮ್.ತಾಮನ್ಕರ್, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಉಪಸ್ಥಿತರಿದ್ದರು.
ನಂತರ ಶಿಕ್ಷಣ ತಜ್ಞರಾದ ಶ್ರೀ.ಪಿ.ವಿ.ಕುಳಮರ್ವ ರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.ಕವಯಿತ್ರಿ ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Back to top button