ಅರಂತೋಡು ತೊಡಿಕಾನ ವಲಯ ಕಾಂಗ್ರೆಸ್ ಸಮಿತಿ ಸಭೆ-ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ…

ಅಗಲಿದ ನಾಯಕರಿಗೆ ಕಾರ್ಯಕರ್ತರಿಗೆ ಸಂತಾಪ ಸೂಚಕ ಸಭೆ...

ಸುಳ್ಯ: ದ ಕ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪರವಾಗಿ ಚುನಾವಣಾ ಪ್ರಚಾರದಲ್ಲಿ ದುಡಿದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಅಗಲಿದ ಕಾಂಗ್ರೆಸ್ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಸಂತಾಪ ಸೂಚಕ ಸಭೆಯು ಮೇ 30 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನ ದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಅರಂತೋಡು ವಲಯ ಅಧ್ಯಕ್ಷ ಜನಾರ್ಧನ ಅಡ್ಕಬಳೆ ವಹಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ, ಸುಳ್ಯ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ, ನೈರುತ್ಯ ಪದವಿ ಕ್ಷೇತ್ರದ ಚುನಾವಣಾ ವೀಕ್ಷಕ ಪ್ರದೀಪ್ ಕುಮಾರ್ ರೈ,ನಿವೃತ್ತ ಶಿಕ್ಷಣಾಧಿಕಾರಿ ಮಲ್ಲೇಶಪ್ಪ,ಅರಂತೋಡು ಜಿಲ್ಲಾ ಪಂಚಾಯತ್ ಕ್ಷೇತ್ರದ ವೀಕ್ಷಕ ದಿನೇಶ್ ಅಂಬೆಕಲ್ಲು,ತೀರ್ಥರಾಮ ಪರ್ಣೋಜಿ ,ತೊಡಿಕಾನ ವಲಯ ಅಧ್ಯಕ್ಷ ತಿಮ್ಮಯ್ಯ ಮೆತ್ತಡ್ಕ, ರೈತ ಮುಖಂಡ ದೇವಪ್ಪ ಕುಂದಲ್ಪಾಡಿ ,ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಅಬೂಬಕ್ಕರ್ ಪಾರೆಕ್ಕಲ್ ,ತಾಜುದ್ದೀನ್ ಅರಂತೋಡು, ಜುಬೇರ್ ಅರಂತೋಡು, ಸಂತೋಷ್ ಕಿರ್ಲಾಯ ,ಸದಾನಂದ ಮೆರ್ಕಜೆ,ಬಾಲಣ್ಣ ಇರ್ನೇ,ಹಮೀದ್,ನಾಗಪ್ಪ ಸೇರಿದಂತೆ ಮುಂತಾದವರು ಇದ್ದರು.
ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಗುಂಡಿ ಸ್ವಾಗತಿಸಿ, ಎನ್ ಎಸ್ ಯು ಐ ಜಿಲ್ಲಾ ಉಪಾಧ್ಯಕ್ಷ ಆಶಿಕ್ ಅರಂತೋಡು ವಂದಿಸಿದರು.

whatsapp image 2024 05 31 at 12.31.44 pm (1)

whatsapp image 2024 05 31 at 12.31.45 pm

Sponsors

Related Articles

Back to top button