ಬಿ.ಸಿ.ರೋಡು ಸಂಚಯಗಿರಿಯ ಅನುಷಾ ಜಿ.ಎಲ್. ಸಿಎ ಪರೀಕ್ಷೆಯಲ್ಲಿ ತೇರ್ಗಡೆ…

ಬಂಟ್ವಾಳ: ಕಳೆದ ಮೇ ತಿಂಗಳಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಬಿ.ಸಿ.ರೋಡು ಸಂಚಯಗಿರಿಯ ಅನುಷಾ ಜಿ.ಎಲ್. ಅವರು ತೇರ್ಗಡೆ ಹೊಂದಿದ್ದಾರೆ.
ಇವರು ಪ್ರೌಢ ಶಿಕ್ಷಣವನ್ನು ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಸ್.ವಿ.ಎಸ್.ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿದ್ದರು. ಮಂಗಳೂರಿನ ಕಂಕನಾಡಿ ರಾಜನ್ ಡಿಸೋಜ ಅವರಿಂದ ಸಿಎ ತರಬೇತಿ ಹಾಗೂ ಮುಂಬಯಿನ ದೋಯ್ಜಿ ಬ್ಯಾಂಕಿನಲ್ಲಿ ಕೈಗಾರಿಕಾ ತರಬೇತಿ ಪಡೆದಿದ್ದರು. ಅವರು ಸಂಚಯಗಿರಿ ನಿವಾಸಿ, ಸಜೀಪನಡು ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಲೋಕನಾಯಕ್ ಹಾಗೂ ಜಯಂತಿ ಬಾಯಿ ಎಚ್.ಜಿ. ದಂಪತಿಗಳ ಪುತ್ರಿಯಾಗಿದ್ದಾರೆ.