ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಪದವಿ ಪ್ರದಾನ ಸಮಾರಂಭ…

ಮೂಡುಬಿದ್ರಿ: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2020 – 21 ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನ. 27 ರಂದು ನಡೆಯಿತು.
ಯೆನೆಪೋಯ ವಿಶ್ವವಿದ್ಯಾನಿಲಯದ ಸಹ ಉಪಕುಲಪತಿ ಡಾ. ಬಿ.ಎಚ್. ಶ್ರೀಪತಿ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ತಮ್ಮ ಹೆತ್ತವರಿಗೆ, ಶಿಕ್ಷಕರಿಗೆ ಮತ್ತು ವಿದ್ಯೆ ಕಲಿತ ಸಂಸ್ಥೆಗೆ ಚಿರಋಣಿಯಾಗಿರಬೇಕು. ಭವಿಷ್ಯದಲ್ಲಿ ತಾವು ಕಲಿತ ವಿದ್ಯಾಸಂಸ್ಥೆಗೆ ಯಾವ ವಿಧದಲ್ಲಾದರೂ ಕೊಡುಗೆ ನೀಡುವಲ್ಲಿ ಯೋಚಿಸಬೇಕು. ಮಾತ್ರವಲ್ಲದೆ ಸಮಾಜಕ್ಕೆ ಕೂಡ ವಿಶೇಷವಾದ ಕೊಡುಗೆ ನೀಡಬೇಕು ಎಂದರು. ಇಂಜಿನಿಯರಿಂಗ್ ಪದವೀಧರರು ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಜವಾಬ್ದಾರಿ ಹೊಂದಬೇಕು. ಒಳ್ಳೆಯ ಯೋಚನೆ, ಕಲ್ಪನೆ ಇದ್ದರೆ ಅವಕಾಶಗಳು ತನ್ನಿಂತಾನೇ ದೊರೆಯುತ್ತದೆ ಎಂದ ಅವರು ಪ್ರಾಮಾಣಿಕತೆ, ಬದ್ಧತೆ, ಕಠಿಣ ಪರಿಶ್ರಮ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದರು.
ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಯೆನೆಪೋಯ ಆಬ್ದುಲ್ಲ ಕು೦ಞ ಅವರು ಅಧ್ಯಕ್ಷತೆ ವಹಿಸಿ, ಪದವಿ ಗಳಿಸುವುದು ಮುಂದಿನ ಉತ್ತಮ ಭವಿಷ್ಯದ ಮೆಟ್ಟಿಲು. ಜ್ಞಾನವು ಶಕ್ತಿಯ ಸಂಪತ್ತು. ಜೀವನದಲ್ಲಿ ಕಲಿಕೆಯು ನಿರಂರತ ಪ್ರಕ್ರಿಯೆ. ಹೊಸ ಹೊಸ ವಿಷಯಗಳನ್ನು ಕಲಿತು ಅವಕಾಶಗಳನ್ನು ಅನ್ವೇಷಿಸಬೇಕು ಎಂದರು.ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಲಿತ ಎಲ್ಲರೂ ಹೆಮ್ಮೆ ಪಡುವಂತ ಸಾಧನೆ ಮಾಡಬೇಕು ಎಂದ ಅವರು ಪದವೀಧರರ ಯಶಸ್ಸಿಗಾಗಿ ಶುಭ ಹಾರೈಸಿದರು.
ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ನ ಟ್ರಸ್ಟೀ ರಾಮಚಂದ್ರ ಶೆಟ್ಟಿ, ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ನ ಕಾರ್ಯದರ್ಶಿ,ಯೆನೆಪೋಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಅಖ್ತರ್ ಹುಸೇನ್, ಎಲ್ಲ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಜಿ. ಡಿಸೋಜ ಸ್ವಾಗತಿಸಿದರು ಮತ್ತು ಪ್ರತಿಜ್ಞಾ ವಿಧಿ ಬೋಧಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸತೀಶ ಎನ್ ಅತಿಥಿಗಳ ಪರಿಚಯ ಮಾಡಿದರು. ಪ್ರೊ. ನಾಝಿಯಾ ವಂದಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ದೀಕ್ಷಾ ಕೆ ಆರ್ ಕಾರ್ಯಕ್ರಮ ನಿರೂಪಿಸಿದರು.
ಯೆನೆಪೋಯ ಗ್ರೂಪ್ ನ ಕಾರ್ಯಾಚರಣೆಗಳ ನಿರ್ದೇಶಕರಾದ ಯೆನೆಪೋಯ ಅಬ್ದುಲ್ಲಾ ಜಾವೇದ್ , ಯೆನೆಪೋಯ ವಿಶ್ವವಿದ್ಯಾನಿಲಯದ ಸಹ ಕುಲಪತಿ ಫರ್ಹಾದ್ ಯೆನೆಪೋಯ, ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್ ಉಪಸ್ಥಿತರಿದ್ದರು.