ನ.24 ರಿಂದ 28 – ‘ಮಕ್ಕಳ ಮಾಯಾಲೋಕ’ ನಾಟಕದ ಪ್ರದರ್ಶನ…

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಆಶ್ರಯದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯಿಸುವ ಮಕ್ಕಳ ಮಾಯಾಲೋಕ ನಾಟಕದ ಪ್ರದರ್ಶನವನ್ನು ನ.24 ರಿಂದ 28 ರ ವರೆಗೆ ಪ್ರತಿದಿನ ಸಂಜೆ 6.45 ಕ್ಕೆ ಮೂಡುಬಿದಿರೆಯ ಸ್ಕೌಟ್ ಮತ್ತು ಗೈಡ್ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.
ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ಈಗಾಗಲೇ ರಾಜ್ಯಾದ್ಯಂತ 270 ಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡಿರುವ
ಕೆ.ಜಿ.ಕೃಷ್ಣಮೂರ್ತಿ ರಚಿಸಿದ ‘ ಮಕ್ಕಳ ಮಾಯಾಲೋಕ ‘ ನಾಟಕವು ಮತ್ತೆ ಹೊಸ ಮುಖಗಳೊಂದಿಗೆ, ಹೊಸ ದೃಷ್ಟಿಕೋನದಿಂದ ಕಟ್ಟಲ್ಪಟ್ಟು ಪ್ರದರ್ಶನಕ್ಕೆ ಸಜ್ಜಾಗಿದೆ.
ಆಳ್ವಾಸ್ ವಿದ್ಯಾರ್ಥಿ ಕಲಾವಿದರ ವೃತ್ತಿಪರತೆ,ವಿಶೇಷ ರಂಗ ತಂತ್ರ, ರಮ್ಯ-ರೋಮಂಚಕ ದೃಶ್ಯ ಲೋಕ, ಸುಶ್ರಾವ್ಯ ಸಂಗೀತ,ನಿಖರ ಬೆಳಕು ಸಂಯೋಜನೆ ,ಉತ್ತಮ ವಸ್ತು- ಮತ್ತು ವಸ್ತ್ರ ವಿನ್ಯಾಸ-ಇತ್ಯಾದಿಗಳಿಂದ ಕೂಡಿದ ಮಕ್ಕಳ ಮಾಯಾಲೋಕವು ಬಹು ಬೇಡಿಕೆಯ ನಾಟಕವಾಗಿದ್ದು ಪ್ರೇಕ್ಷಕರಲ್ಲಿ ಪ್ರತಿಕ್ಷಣವೂ ಹೊಸ ಅನುಭವ ಮೂಡಿಸಲಿದೆ.
ಮೂಡಬಿದಿರೆ ಕನ್ನಡ ಭವನದಲ್ಲಿ ಸಾರ್ವಜನಿಕರು,ವಿದ್ಯಾರ್ಥಿಗಳು ಸೇರಿ ಒಟ್ಟು 1000 ಜನರಿಗೆ ನೋಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಭಾ ಕಾರ್ಯಕ್ರಮ ಇರುವುದಿಲ್ಲ.ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ನಾಟಕಕ್ಕೆ ಪ್ರವೇಶ ಉಚಿತ ವಾಗಿರುತ್ತದೆ ಎಂದು ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವ ಅವರು ತಿಳಿಸಿದ್ದಾರೆ.

Sponsors

Related Articles

Back to top button