ಅಡ್ಯಡ್ಕ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ತಾದ ಮರ…
ಸುಳ್ಯ : ಅಡ್ಯಡ್ಕ ಸಮೀಪ ಪಾತೊಟ್ಟಿ ಎಂಬಲ್ಲಿ ರಾತ್ರಿ ಸುರಿದ ಗಾಳಿ ಮಳೆಗೆ ಬೃಹತ್ತಾದ ಮರ ರಸ್ತೆಗೆ ಅಡ್ಡಲಾಗಿ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆ ವರದಿಯಾಗಿದೆ.
ಮರವನ್ನು ತೆರವುಗೊಳಿಸಲು ಗುರುಪ್ರಸಾದ್ ನಾರ್ಕೋಡು ರವರ 3 ಕಟ್ಟಿಂಗ್ ಮಿಷನ್ ತಂದು ಕತ್ತರಿಸಲಾಯಿತು.ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ರಾದವೇಣು ಪೆತ್ತಾಜೆ,ಭವಾನಿ ತೊಡಿಕಾನ, ರೈತ ಸಂಘದ ಮುಖಂಡ ತೀರ್ಥರಾಮ ಪರ್ನೋಜಿ,ಸೋಮಶೇಖರ ಪೈಕ, ತೊಡಿಕಾನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಕೊಳಲುಮೂಲೆ, ದಿನೇಶ,ಪ್ರಸನ್ನಪದ್ಮಯ್ಯ,ಕುಂಞಣ್ಣ (ಗುರು ಜೀಪು),ಲೀಲಾಧರ ತೊಡಿಕಾನ,ತಾಜುದ್ದೀನ್ ಅರಂತೋಡು ಸೇರಿದಂತೆ 30 ಕ್ಕೂ ಹೆಚ್ಚು ಮಂದಿ ಸಹಕರಿಸಿದರು. ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ,ತೊಡಿಕಾನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಉಳುವಾರು ಭೇಟಿ ನೀಡಿದರು .