ಫರಂಗಿಪೇಟೆ – ನೂತನ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದ ಸಮಾಲೋಚನಾ ಸಭೆ…
ಬ್ರಹ್ಮಕಲಶ ಸಮಿತಿ ರಚನೆ - ಅಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ ಆಯ್ಕೆ...

ಬಂಟ್ವಾಳ :ಫರಂಗಿಪೇಟೆ ವಿಜಯನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದ ಬ್ರಹ್ಮಕಲಶ, ಶ್ರೀ ಆಂಜನೇಯ ದೇವರ ಹಾಗೂ ಗಣಪತಿ ದೇವರ ಪ್ರತಿಷ್ಠಾಪನೆಯ ಕಾರ್ಯಕ್ರಮವು ಜನವರಿ 21ರಿಂದ 26 ರ ತನಕ ನಡೆಯಲಿದ್ದು ಪೂರ್ವಭಾವಿಯಾಗಿ ಪುದು, ತುಂಬೆ,ಕಳ್ಳಿ ಗೆ ,ಕೊಡ್ಮನ್, ಮೇರಮಜಲು, ಅರ್ಕುಳ ಗ್ರಾಮಗಳೊನ್ನೊಳಗೊಂಡ 6 ಗ್ರಾಮಗಳ ಭಕ್ತರ ಸಮಾಲೋಚನಾ ಸಭೆ ಹಾಗು ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆಯು ನ.6ರಂದು ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ವಠಾರದಲ್ಲಿ ನಡೆಯಿತು.
ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರ ಅಧ್ಯಕ್ಷತ್ಜೆ ಯಲ್ಲಿ ನಡೆದ ಸಭಾವೇದಿಕೆಯಲ್ಲಿ, ದೇಗುಲ ನಿರ್ಮಾಣ ಸಮಿತಿಯ ಗೌರವ ಅಧ್ಯಕ್ಷರಾದ ಐತಪ್ಪ ಆಳ್ವ ಸುಜೀರುಗುತ್ತು, ಅಧ್ಯಕ್ಷರಾದ ಅಜಿತ್ ಚೌಟ , ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ ಮುನ್ನೂರು, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ , ಸಂಚಾಲಕರಾದ ವಿಠ್ಠಲ್ ಆಳ್ವ ಗರೋಡಿ , ಡಾ ರವೀಶ್ ತುಂಗಾ , ಅರ್ಕುಳ ಕಂಪ ಸದಾನಂದ ಆಳ್ವ , ವೀರಾಂಜನೇಯ ವ್ಯಾಯಾಮ ಶಾಲೆ ಅದ್ಯಕ್ಷರಾದ ಚಂದ್ರಶೇಖರ ಗಂಭೀರ , ಶಿಕ್ಷಕರಾದ ಪ್ರಭಾಕರ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ಧರು.