ಮಾ.8 ರಂದು ಪೆರಾಜೆಗುತ್ತು ಶ್ರೀ ಗುಡ್ಡೆಚಾಮುಂಡಿ ಪುನರ್ ಪ್ರತಿಷ್ಠೆ- ಫೆ.15 ರಂದು ಚಪ್ಪರ ಮುಹೂರ್ತ…
ಬಂಟ್ವಾಳ ಫೆ. 12 : ಶ್ರೀ ಗುಡ್ಡೆಚಾಮುಂಡಿ ಹಾಗೂ ಪರಿವಾರ ದೈವಗಳ ಭಂಡಾರ ಚಾವಡಿ ಮತ್ತು ಜುಮಾದಿ ಬಂಟ ದೈವಸ್ಥಾನ ಪೆರಾಜೆಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶದ ಚಪ್ಪರ ಮುಹೂರ್ತ ಫೆ.15 ರಂದು ಭಾನುವಾರ ನಡೆಯಲಿದೆ ಎಂದು ಪ್ರತಿಷ್ಠಾ ಬ್ರಹ್ಮಕಲಶ ಸಮಿತಿ ಅಧ್ಯಕ್ಷ, ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ಜಗನ್ನಾಥ ಚೌಟ ಮಾಣಿ ತಿಳಿಸಿದ್ದಾರೆ.
ಅವರು ಪೆರಾಜೆಗುತ್ತು ದೈವಗಳ ಭಂಡಾರ ಚಾವಡಿಯಲ್ಲಿ ಪೂರ್ವ ಸಿದ್ದತೆಗಾಗಿ ನಡೆದ ಪ್ರತಿಷ್ಠಾ ಬ್ರಹ್ಮಕಲಶ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ವಿವಿಧ ಸಮಿತಿಗಳ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು.
ಬ್ರಹ್ಮಶ್ರೀ ವೇ.ಮೂ. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೈವ ಸಾನ್ನಿಧ್ಯಗಳ ಪುನರ್ ಪತ್ರಿಷ್ಠೆ, ಸಾನ್ನಿಧ್ಯ ಕಲಶಾಭಿಷೇಕವು ಮಾ. 8 ರಂದು ನಡೆಯಲಿದೆ.
ಬೆಳಿಗ್ಗೆ ಗಣಪತಿ ಹೋಮ, ಭಜನಾ ಸಂಕೀರ್ತನೆ, ಸಭಾ ಕಾರ್ಯಕ್ರಮ , ಸಾನ್ನಿಧ್ಯಗಳ ಪ್ರತಿಷ್ಠೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದುರ್ಗಾಪೂಜೆ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದು, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಾರ್ಚ್ 7 ರಂದು ಉಗ್ರಾಣ ಮುಹೂರ್ತ ನೆರವೇರಲಿದ್ದು ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ ತಂತ್ರಿಗಳ ಆಗಮನ ಬಳಿಕ ವಿವಿಧ ಪ್ರಾಸಾದ ಶುದ್ಧಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಚ್ಚಿದಾನಂದ ರೈ ಪಾಳ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಶಲ ಎಮ್ ಪೆರಾಜೆ , ಅನುವಂಶೀಯ ಆಡಳಿತ ಮೊಕ್ತೇಸರ ಶ್ರೀಕಾಂತ ಆಳ್ವ ಪೆರಾಜೆ ಗುತ್ತು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜನಾರ್ದನ ಪಾಳ್ಯ, ಡಾ. ಶ್ರೀನಾಥ್ ಅಳ್ವ , ಜಯರಾಮ ರೈ ಪೆರಾಜೆಗುತ್ತು ವೇದಿಕೆಯಲ್ಲಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ವಿವಿಧ ಸಮಿತಿಗಳ ಪ್ರಮುಖರಾದ ರವೀಂದ್ರ ರೈ ಮಂಜೊಟ್ಟಿ, ಬಾಬು ಪೂಜಾರಿ ಕೊಪ್ಪಳ, ರಾಮಣ್ಣ ಗೌಡ ಕೂಡೋಳು, ರಾಜೇಂದ್ರ ರೈ ಮಂಜೊಟ್ಟಿ, ಸಂಜೀವ ನಾಯ್ಕ ನಡುಪಾಲು, ಶ್ರೀನಿವಾಸ ಪೂಜಾರಿ ಮಿತ್ತ ಪೆರಾಜೆ, ಸುಂದರ ಗೌಡ ಮಂಜೊಟ್ಟಿ, ಲಕ್ಷ್ಮೀಶ ಪಿ. , ಉಮೇಶ ಎಸ್.ಪಿ., ನಾರಾಯಣ ಎಮ್.ಪಿ. ಸುಂದರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.


