ನಿತ್ಯ ನಿರಂತರ ಚಟುವಟಿಕೆಯಿಂದ ಚೈತನ್ಯಶೀಲರಾಗಿರಿ – ವಸಂತ ಮಾಧವ…
ಬಂಟ್ವಾಳ: ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಯುವ ಸಪ್ತಾಹದ ಸಮಾರೋಪ ಸಮಾರಂಭವು ಪ್ರೇರಣಾ ಸಭಾಭವನದಲ್ಲಿ ನಡೆಯಿತು. ಸಮಾರೋಪ ಭಾಷಣ ಮಾಡಿದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ವಿವೇಕಾನಂದರ ಜೀವನ ವೃತ್ತಾಂತ ತಿಳಿಸುತ್ತಾ, ಯುವ ಸಮುದಾಯ ನಿತ್ಯ ನಿರಂತರವಾಗಿ ಚಟುವಟಿಕೆಯಿಂದ ಇದ್ದು ಚೈತನ್ಯಶಾಲಿ ಯಾಗಿ ಇರಬೇಕು.. ದೇಶದ ಬದಲಾಯಿಸಬೇಕಾದರೆ ಯುವ ಸಮುದಾಯ ಕಾರಣೀಭೂತರಾಗಬೇಕು.ಆ ನಿಟ್ಟಿನಲ್ಲಿ ವಿವೇಕಾನಂದರ ಜೀವನ ನಮಗೆ ಆದರ್ಶ ಎಂದರು.
ಜನವರಿ 12 ರಿಂದ ಪ್ರಾರಂಭ ಗೊಂಡ ಯುವ ಸಪ್ತಾಹವು ಪ್ರತಿ ದಿನ ಪ್ರಬಂಧ, ಚಿತ್ರಕಲೆ, ಸನ್ಯಾಸಿ ಗೀತೆ, ವಿವೇಕಾನಂದರ ಚಲನಚಿತ್ರ, ಭಾಷಣ, ಮನೆ ಮನೆಗೆ ವಿವೇಕ ಸಂದೇಶ ಮುಂತಾದ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಪ್ರಬಂಧ,ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕೆ. ಎನ್ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಯತಿರಾಜ್ ಪಿ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಪೂರ್ಣಿಮಾ ಪ್ರಥಮ ಬಿಕಾಂ ಸ್ವಾಗತಿಸಿ, ದೀಕ್ಷಾ ದ್ವಿತೀಯ ಬಿಎ ವಂದಿಸಿ, ನಿಖಿತಾ ದ್ವಿತೀಯ ಬಿಕಾಂ ಕಾರ್ಯಕ್ರಮ ನಿರ್ವಹಿಸಿದರು.