ಬಂಟ್ವಾಳ ಕೃಷಿ ಇಲಾಖೆಯ ವತಿಯಿಂದ ಮಣಿನಾಲ್ಕೂರು ಸೇವಾ ಸಹಕಾರಿ ಸಂಘ (ನಿ.) ಇವರಿಗೆ ಕೃಷಿ ಯಂತ್ರೋಪಕರಣ ಬಾಡಿಗೆ ಕೇಂದ್ರ ಸ್ಥಾಪನೆಗೆ ಪ್ರೋತ್ಸಾಹ…
ಬಂಟ್ವಾಳ: ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿ ಬಂಟ್ವಾಳ ಕೃಷಿ ಇಲಾಖೆಯ ವತಿಯಿಂದ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಮಣಿನಾಲ್ಕೂರು ಸೇವಾ ಸಹಕಾರಿ ಸಂಘ (ನಿ.) ಇವರಿಗೆ ಕೃಷಿ ಯಂತ್ರೋಪಕರಣ ಬಾಡಿಗೆ ಕೇಂದ್ರ ಸ್ಥಾಪನೆಗೆ ಶೇ. 80ರ ಸಹಾಯಧನ ದಲ್ಲಿ 2 ಟ್ರಾಕ್ಟರ್ ಹಾಗೂ 2 ರೋಟೋವೆಟರ್ ನ್ನು ಹಾಗೂ ಶೇ.50 ರ ಸಹಾಯಧನದಲ್ಲಿ ಫಲಾನುಭವಿ ಕೊಯಿಲ ಗ್ರಾಮದ ಸ್ವಾತಿ ಗೋಪಾಲ ರೈ ಅವರಿಗೆ ಉಳುಮೆ ಯಂತ್ರವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು , ಕೃಷಿಕರ ಉತ್ಪಾದನೆ ಯನ್ನು ಇಮ್ಮಡಿ ಗೊಳಿಸಲು ಅನೇಕ ಯೋಜನೆ ಗಳನ್ನು ಜಾರಿಮಾಡಿದೆ. ಹೊಸ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ಯಶಸ್ಸು ಗಳಿಸಿಲು ಉತ್ತೇಜನ ನೀಡುತ್ತಿದ್ದು, ಕೃಷಿಕರು ಇದರ ಸಂಪೂರ್ಣ ಲಾಭ ಪಡೆಯುವಂತೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಕ್ಯಾಡ್ಸ್ ಅಧ್ಯಕ್ಷ ಮಾಜಿ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಸ್ಕ್ಯಾಡ್ಸ್ ನ ಟೆಕ್ನಿಶಿಯನ್ ವಸಂತ ಗೌಡ, ಮಣಿನಾಲ್ಕೂರು ಸೇವಾ ಸಹಕಾರಿ ಸಂಘ ಅಧ್ಯಕ್ಷ ರಾಧಾಕೃಷ್ಣ ಮಯ್ಯ, ನಿರ್ದೇಶಕ ರುಗಳಾದ ದನಂಜಯ ಶೆಟ್ಟಿ, ದಯಾನಂದ ಶೆಟ್ಟಿ, ಜೋಕಿಂ ಪಿಂಟೋ, ತಿಲಕ್ ಬಂಗೇರ, ವಿಶ್ವನಾಥ ಪೂಜಾರಿ, ನಾಣ್ಯಪ್ಪ ಪೂಜಾರಿ, ಕೃಷ್ಣಪ್ಪ, ನಿಶಾಂತ್ ಶೆಟ್ಟಿ, ಪ್ರಮುಖ ರಾದ ರಾಮಕೃಷ್ಣ ಮಯ್ಯ, ಶಾಂತಪ್ಪ ಪೂಜಾರಿ, ಲ್ಯಾನ್ಸಿ ಫರ್ನಾಂಡೀಸ್, ಪುಷ್ಪರಾಜ್ ಚೌಟ, ಆನಂದ ಶಂಭೂರು, ಯಶೋಧರ ಕರ್ಬೆಟ್ಟು, ಯಶವಂತ ನಾಯ್ಕ್, ಬಂಟ್ವಾಳ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಂದನ್ ಶೆಣೈ, ಪಾಣೆಮಂಗಳೂರು ಕೃಷಿ ಅಧಿಕಾರಿ ಅನಘವಾಡಿ, ಆತ್ಮ ಯೋಜನೆ ಯ ಬಿ.ಟಿ.ಎಮ್ ದೀಕ್ಷಾ, ಆತ್ಮಯೋಜನೆಯ ಎ.ಟಿ.ಎಮ್ ಹನುಮಂತ ಕಾಳಗಿ ಮತ್ತಿತರರು ಉಪಸ್ಥಿತರಿದ್ದರು.