ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, 10ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ತನ್ನನ್ನು ಶಾಸಕನಾಗಿ, ಸಚಿವನಾಗಿ, ವಿಪಕ್ಷ ಉಪನಾಯಕನಾಗಿ ಹಾಗೂ ವಿಧಾನಸಭಾಧ್ಯಕ್ಷನಾಗಿ ಆಯ್ಕೆ ಮಾಡುವಲ್ಲಿ ಪುದು ಗ್ರಾಮಸ್ಥರ ಸಹಕಾರ ವಿಶೇಷವಾಗಿದ್ದು, ಪ್ರಸ್ತುತ ಗ್ರಾಮಕ್ಕೆ ೨.೧೦ ಕೋ.ರೂ. ಅನುದಾನ ನೀಡಿ ಶೀಘ್ರ ಅದರ ಕಾಮಗಾರಿಗಳು ಆರಂಭಗೊಳ್ಳಲಿದೆ. ೨೪ ಗಂಟೆಯೂ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿಯೂ ಕೊನೆಯ ಹಂತದಲ್ಲಿದೆ ಎಂದರು.
ಸ್ಥಳೀಯ ಸಾಮಾಜಿಕ ಮುಂದಾಳು ಅಬೂಬಕ್ಕರ್ ಕುಂಜತ್ಕಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ, ಗ್ರಾ.ಪಂ.ಉಪಾಧ್ಯಕ್ಷ ಇಕ್ಬಾಲ್ ಸುಜೀರು, ಮಾಜಿ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ, ಮೊಹಮ್ಮದ್ ಹನೀಫ್, ತ್ವಾಹ ಜುಮಾ ಮಸೀದಿ ಅಧ್ಯಕ್ಷ ಎಸ್.ಹಸನಬ್ಬ, ಧರ್ಮಗುರು ರಹಮಾ ಶಾಫಿ ಕೊಡಗು, ಮಾಜಿ ತಾ.ಪಂ.ಸದಸ್ಯ ಇಕ್ಬಾಲ್ ದರ್ಬಾರ್, ಗ್ರಾ.ಪಂ.ಸದಸ್ಯರಾದ ಅಬೂಬಕ್ಕರ್ ನಝೀರ್, ಇಶಾಮ್ ಫರಂಗಿಪೇಟೆ, ರಝಾಕ್ ಅಮ್ಮೆಮಾರ್, ಇಕ್ಬಾಲ್ ಪಾಡಿ, ಹನ್ಸ್ ಅಮ್ಮೆಮಾರ್, ಉದ್ಯಮಿ ಅಬ್ದುಲ್ ರಹಿಮಾನ್, ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಪಿಎಸ್‌ಐ ಸುತೇಶ್ ಕೆ.ಪಿ, ಪ್ರಮುಖರಾದ ಮಹಮ್ಮದ್ ಬುಕಾರಿ, ನಜೀರ್ ಎನ್.ಎಂ, ನಿಜಾಮ್, ಶಾಕೀರ್, ಇಸ್ಮಾಯಿಲ್ ಐ.ಕೆ., ಅಬೂಬಕ್ಕರ್ ಸಿದ್ದೀಕ್, ಇಸ್ಮಾಯಿಲ್ ಕುಂಜತ್ಕಳ, ಲತೀಫ್ ಕರ್ಮಾರ್, ಶರೀಫ್, ನಿಶಾರ್, ಖಾಲಿದ್, ಸಫ್ವಾನ್ ಮೊದಲಾದವರಿದ್ದರು.
ಕೆ. ಮಹಮ್ಮದ್ ಮುಸ್ತಾಫ ಸ್ವಾಗತಿಸಿದರು. ಇರಾ ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.

whatsapp image 2025 07 12 at 7.45.59 am

Sponsors

Related Articles

Back to top button