ಗ್ರಾಮೀಣ ಕ್ರೀಡಾಕೂಟದಿಂದ ದೇಶದ ಪ್ರತಿಭೆಗಳ ಶೋಧನೆಗೆ ಸಹಕಾರಿ – ಟಿ ಎಂ ಶಾಹಿದ್ ತೆಕ್ಕಿಲ್…
ಸುಳ್ಯ: ತಾಲೂಕು ಪಂಚಾಯತ್ ಸುಳ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳ್ಳಾರೆಯಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರತಿಭೆಗಳನ್ನ ಗುರುತಿಸಲು ಇಂತಹ ಕ್ರೀಡಾ ಕೂಟಗಳು ಅಗತ್ಯ. ಸುಳ್ಯದ ಅಧಿಕಾರಿ ವರ್ಗ, ಆಡಳಿತ ವರ್ಗ ಒಳ್ಳೆಯ ರೀತಿಯಲ್ಲಿ ಜನಪರವಾಗಿ ದುಡಿಯುತ್ತಿದ್ದು ಎಲ್ಲಾ ರಂಗದಲ್ಲೂ ಸುಳ್ಯ ಹೆಸರುವಾಸಿಯಾಗಿದೆ ಎಂದರು. ಇಂತಹ ಗ್ರಾಮೀಣ ಕ್ರೀಡಾಕೂಟದಿಂದ ಗ್ರಾಮೀಣ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಲು ಅವಕಾಶ ಆಗಿದೆ. ಮುಂದೆ ಕೂಡ ಇಂತಹ ಕ್ರೀಡಾಕೂಟಕ್ಕೆ ಎಲ್ಲರೂ ಕೈಜೋಡಿಸಲು, ಸಹಕರಿಸಲು ಕರೆ ನೀಡಿ ಸಮಾರಂಭಕ್ಕೆ ಶುಭ ಕೋರಿದರು.
ಬೆಳ್ಳಾರೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀನಾಥ್ ಕ್ರೀಡಾ ಕೂಟವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಎಸ್ ಪಿ ಮಹದೇವ್, ವೀಣಾ ಎಂ ಟಿ, ಉಮಾಕುಮಾರಿ, ಸೂಫಿ ಪೆರಾಜೆ, ಮಾಯಿಲಪ್ಪ, ಮಾಧವ ಗೌಡ, ಜಿ ಕೆ ಹಮೀದ್ ಗೂನಡ್ಕ ಮೊದಲಾದವರು ಭಾಗವಹಿಸಿದ್ದರು. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಸ್ವಾಗತಿಸಿ, ಗ್ರಾಮೀಣ ಕ್ರೀಡಾಕೂಟದ ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ ವಂದಿಸಿದರು.